ಜೂನ್ 3ಕ್ಕೆ ಅದಿತಿ-ಶ್ರೀ ಜೋಡಿಯ ‘ಗಜಾನನ ಅಂಡ್ ಗ್ಯಾಂಗ್’ ರಿಲೀಸ್…!!!
ಜೂನ್ 3ಕ್ಕೆ ‘ಗಜಾನನ ಅಂಡ್ ಗ್ಯಾಂಗ್’ ರಿಲೀಸ್…300 ಥಿಯೇಟರ್ ನಲ್ಲಿ ಅದಿತಿ-ಶ್ರೀ ಜೋಡಿಯ ಕಮಾಲ್
ಶ್ರೀ-ಅದಿತಿ ಜೋಡಿಯ ಗಜಾನನ ಅಂಡ್ ಗ್ಯಾಂಗ್ ರಿಲೀಸ್ ಗೆ ಸಜ್ಜು… ಜೂ.3ಕ್ಕೆ ಬಿಗ್ ಸ್ಕ್ರೀನ್ ಗೆ ಸಿನಿಮಾ ಎಂಟ್ರಿ.
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಶ್ರೀಮಹದೇವ್ ಹಾಗೂ ಶ್ಯಾನೆ ಟಾಪಾಗಿರುವ ಬ್ಯೂಟಿ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಬಿಡುಗಡೆಗೆ ಹೊಸ ಮುಹೂರ್ತ ನಿಗಧಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಕಳೆದ ಫೆಬ್ರವರಿ 4ರಂದು ಬೆಳ್ಳಿತೆರೆ ಅಂಗಳಕ್ಕೆ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಎಂಟ್ರಿ ಕೊಡಬೇಕಿತ್ತು. ಆದ್ರೆ ಕೊರೋನಾ ಕಾಟ ಸಿನಿಮಾ ಓಟಕ್ಕೆ ಬ್ರೇಕ್ ಆಗಿತ್ತು. ಹೀಗಾಗಿ ಸಿನಿಮಾ ಬಿಡುಗಡೆ ಪೋಸ್ಟ್ ಪೋನ್ ಆಗಿತ್ತು. ಈಗ ಸಿನಿಮಾ ತಂಡ ಹೊಸ ಬಿಡುಗಡೆ ದಿನಾಂಕ ಪ್ರಕಟಿಸಿದೆ.
ಜೂ.3ಕ್ಕೆ ಗಜಾನನ ಅಂಡ್ ಗ್ಯಾಂಗ್ ಆಟ
ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಜೂನ್ 3ರಂದು ರಾಜ್ಯಾದ್ಯಂತ ಬರೋಬ್ಬರಿ 300ಕ್ಕೂ ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ.
‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ ಕಂ ನಟ ಅಭಿಷೇಕ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯು ಎಸ್ ನಾಗೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರದ್ಯುತನ್ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಅಲಿಯಾಸ್ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.
‘ಗಜಾನನ ಅಂಡ್ ಗ್ಯಾಂಗ್’ನ ಕಾಲೇಜ್ ಸ್ಟೋರಿ. ಕಾಲೇಜಿನ ಹೀರೋ, ಹೀರೋಯಿನ್, ಗೆಳೆಯರು ಹಾಗೂ ವಿಲನ್ ಸುತ್ತ ಚಿತ್ರದ ಕಥೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ನೋಡುಗರಿಗೆ ಕಚಗುಳಿ ಇಡುತ್ತದೆ. ಹಾಗೆ ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಇಂತಹ ಫ್ಯಾಮಿಲಿ ಪ್ಯಾಕ್ಡ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಹೊಸ ಮುಹೂರ್ತದೊಂದಿಗೆ ನಿಮ್ಮ ಮುಂದೆ ಹಾಜರಾಗಿದ್ದು, ಪ್ರತಿಯೊಬ್ಬರು ಸಿನಿಮಾ ನೋಡಿ ಹಾರೈಸಿ.