katrina kaif : ಕ್ಯಾಟ್ ಗರ್ಭಿಣಿನಾ..?? ಏರ್ಪೋರ್ಟ್ ಲುಕ್ ನಿಂದ ಹುಟ್ಟಿದೆ ಅನುಮಾನ..!!!
ಬಾಲಿವುಡ್ ನಟಿ ಕತ್ರಿನಾ ಕೈಫ್ ಕಳೆದ ವರ್ಷ ವಿಕ್ಕಿ ಕೌಶಲ್ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ..
ಮದುವೆಯ ನಂತರವೂ ವಿಕ್ಕಿ – ಕ್ಯಾಟ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.. ಇತ್ತೀಚೆಗೆ ಕತ್ರಿನಾ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು , ಅವರ ಲುಕ್ ನೋಡಿ ಅಭಿಮಾನಿಗಳು ಕತ್ರಿನಾ ಪ್ರೆಗ್ನೆಂಟಾ ಎಂಬ ಅನುಮಾನ ಹೊರಹಾಕಲಾರಂಭಿಸಿದ್ಧಾರೆ..
ಕತ್ರಿನಾ ಕೈಫ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.. ಅವರ ಸಡಿಲವಾದ ಉಡುಗೆ ಗರ್ಭಧಾರಣೆಯ ವದಂತಿಗಳನ್ನು ಹುಟ್ಟುಹಾಕಿದೆ.
ಅವರು ಪಿಂಕ್ ಕಲರ್ ನ ಸಡಿಲವಾದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು. ಕತ್ರಿನಾ ಕೈಫ್ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದಂತೆ , ಈ ನಟಿ ಗರ್ಭಿಣಿ ಎಂದು ಅಭಿಮಾನಿಗಳು ಊಹಿಸಲು ಪ್ರಾರಂಭಿಸಿದ್ಧಾರೆ. ಆದ್ರೆ ಇದು ಗಾಸಿಪ್ , ಅಭಿಮಾನಿಗಳು ನೆಟ್ಟಿಗರ ಊಹೆ ಅಷ್ಟೇ.. ಅಧಿಕೃತವಾಗಿ ಕತ್ರೀನಾ ಅವರೇ ಹೇಳುವವರೆಗೂ ವದಂತಿಗಳಾಗಿರುತ್ತವೆ ಅಷ್ಟೇ..
ಕತ್ರಿನಾ ಕೈಫ್ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಅವರ ವಿವಾಹವು ಅದ್ಧೂರಿಯಾಗಿ ನಡೆಯಿತು ಮತ್ತು ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.
katrina kaif