ಕನ್ನಡಲ್ಲೇ KGF 2 ಸಿನಿಮಾ ನೋಡಿ ಫಿದಾ ಆದ ತಲೈವಾ..!!!
KGF 2 ಹವಾ ದೇಶಾದ್ಯಂತ ಜೋರಾಗಿದೆ… ಬಾಕ್ಸ್ ಆಫೀಸ್ ನಲ್ಲಿ ರಾಕಿ ಡೋಮಿನೇಟ್ ಮಾಡ್ತಿದ್ದು , ರಾಕಿ ಭಾಯ್ ಚರೀಷ್ಮಾಗೆ ಬಾಲಿವುಡ್ ಮಂದಿ ಹೌಹಾರಿದ್ದಾರೆ.. ರಾಕಿ ಭಾಯ್ ಇಮೇಜ್ ಗೆ ಸ್ಟಾರ್ ಗಳೇ ಫಿದಾ ಆಗಿದ್ದಾರೆ..
ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಕನ್ನಡದಲ್ಲಿ KGF 2 ಸಿನಿಮಾ ನೋಡಿ ಕೊಂಡಾಡಿದ್ದಾರೆ..
ಗುರುವಾರ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚೆನ್ನೈನ ಚಿತ್ರಮಂದಿರದಲ್ಲಿ ರಜನಿಕಾಂತ್ ಅವರು ಸಿನಿಮಾ ವೀಕ್ಷಿಸಿದ್ದಾರೆ..ವಿಶೇಷ ಅಂದ್ರೆ ಕನ್ನಡ ವರ್ಷನ್ನಲ್ಲಿಯೇ ರಜನಿ ಸಿನಿಮಾ ವೀಕ್ಷಿಸಿದ್ದು ಮೆಚ್ಚಿಕೊಂಡಿದ್ಧಾರೆ.
ಸಿನಿಮಾ ವೀಕ್ಷಿಸಿದ ಬಳಿಕ ಶುಕ್ರವಾರ ಬೆಳಗ್ಗೆ ವಿಜಯ್ ಕಿರಂಗದೂರ್ಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಸಿನಿಮಾ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ವಿಶ್ವಾದ್ಯಂತ ಒಟ್ಟು ಸುಮಾರು 275 ಕೋಟಿ ರೂ. ಗಳಿಕೆ ಮಾಡಿದೆ..