ರಿಲೀಸ್ ಆಯ್ತು ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಮೇಕಿಂಗ್…ತೆರೆಹಿಂದಿನ ಕಿರೀಟಿ ಪರಿಶ್ರಮ ನೋಡಿ?
ಬಿದ್ದು ಎದ್ದು ಗೆದ್ದ ಕಿರೀಟಿ…ಬಳ್ಳಾರಿ ಕುವರ ಇಂಟ್ರೂಡಕ್ಷನ್ ಟೀಸರ್ ಹಿಂದಿನ ಪರಿಶ್ರಮ ಅನಾವರಣ
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಕಿರೀಟಿ ನಟನೆಯ ಮೊದಲ ಸಿನಿಮಾದ ಇಂಟ್ರೂಡಕ್ಷನ್ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. ಸ್ವತಃ ಚಿತ್ರಬ್ರಹ್ಮ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ನೋವು, ಕಷ್ಟದ ಪರಿಶ್ರಮ ಅಡಗಿದೆ.
ಟೀಸರ್ ಹಿಂದಿನ ಪರಿಶ್ರಮದ ತುಣುಕು ಅನಾವರಣ…
ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರೂಡಕ್ಷನ್ ಬಿಟಿಎಸ್ ಅಂದ್ರೆ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡರು ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ.
https://we.tl/t-iTq50QE7R5
ಅಂದಹಾಗೇ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15 ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕನಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.