The Kashmir Files : ನಿರ್ದೇಶಕರ ವಿರುದ್ಧ ಸಿಖ್ ಸಂಘದ ಆಕ್ರೋಶ
The Kashmir Files ಸಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ವಿವೇಕ್ ಅಗ್ನಿಹೋತ್ರಿ ಅವರು ಮತ್ತೊಂದು ಇಂತಹದ್ದೇ ಸಿನಿಮಾ ಮಾಡಲು ಹೊರಟಿದ್ದಾರೆ. ‘ಡೆಲ್ಲಿ ಫೈಲ್ಸ್’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.. ಈ ಮೊದಲು ನಿರ್ದೇಶಿಸಿದ್ದ ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು.
ಇದೇ ರೀತಿಯಾಗಿ ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿರಲಿಲ್ಲ… ಆದ್ರೀಗ ಕಥೆಯ ಬಗ್ಗೆ ಒಂದಷ್ಟಯ ಮಾಹಿತಿ ಬಿಟ್ಟುಕೊಟ್ಟಿದ್ದಾರೆ..
ಈ ಬಾರಿ ಆಯ್ಕೆ ಮಾಡಿಕೊಂಡ ವಿಷಯವು 1984ರಲ್ಲಿ ನಡೆದ ನೈಜ ಘಟನೆಯನ್ನೇ ಆಧರಿಸಿದೆಯಂತೆ. ಆ ಸಮಯದ ಸತ್ಯವೇ ಬೇರೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ದೆಹಲಿಯಷ್ಟೇ ಅಲ್ಲ, ತಮಿಳು ನಾಡಿಗೆ ಸಂಬಂಧಿಸಿದ ಒಂದಷ್ಟು ಸತ್ಯಗಳನ್ನೂ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ.
ಆದ್ರೀಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಸಿಖ್ ಸಮುದಾಯದವರು ತಿರುಗಿ ಬಿದ್ದಿದ್ದಾರೆ..
ಹೌದು..! ‘ದಿ ಡೆಲ್ಲಿ ಫೈಲ್ಸ್’ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಸಿಟ್ಟಾಗಿದ್ಧಾರೆ.. ಅಗ್ನಿಹೋತ್ರಿ ವಿರುದ್ಧ ಕಿಡಿಕಾರಿದೆ. ಇಂತಹ ದ್ವೇಷದ ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರು ದುಡ್ಡು ಮಾಡುತ್ತಿದ್ದಾರೆ. ಸಮಾಜದಲ್ಲಿ ಮತ್ತಷ್ಟು ದ್ವೇಷ ಬಿತ್ತುತ್ತಿದ್ದಾರೆ ಎಂದು ಅಸೋಷಿಯೇಷನ್ ಆರೋಪಿಸಿದೆ..
ನಿರ್ದೇಶಕರು ಸಿನಿಮಾದಲ್ಲಿ ಡೆಲ್ಲಿಗೂ ಚೆನ್ನೈಗೂ ನಂಟಿದೆ ಎಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್ ನರಮೇಧದ ಕಥೆ ಎಂದು ಊಹಿಸಲಾಗುತ್ತಿದೆ. ಹೀಗಾಗಿಯೇ ಸಿಖ್ ಸಂಘ ಈ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದೆ.
ಸಮಾಜದಲ್ಲಿ ಈಗಾಗಲೇ ಧರ್ಮ ಧರ್ಮಗಳ ನಡುವೆ ದ್ವೇಷದ ಭಾವನೆಗಳನ್ನು ಹಂಚಲಾಗುತ್ತಿದೆ. ಇದ್ರಿಂದ ಮಾನವ ಸಂಬಂಧಗಳು ಹಾಳಾಗ್ತಿವೆ. ಶಾಂತಿಯನ್ನು ಸ್ಥಾಪಿಸಬೇಕಾದ ಇಂತಹ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ದುಡ್ಡಿಗಾಗಿ ಜನರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಮನಸ್ಸುಗಳು ಹಾಳಾಗುತ್ತವೆ. ಹಾಗಾಗಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ವಿರೋಧಿಸುವುದಾಗಿ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ.
ಈಗಾಗಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಮೂಲಕ ಜನಾಂಗದ ಮಧ್ಯೆ ಮನಸ್ತಾಪಗಳನ್ನು ತಂದಿಟ್ಟಿದ್ದಾರೆ. ಆದ ಘಟನೆಗಳನ್ನು ನೆನಪಿಸುವುದಕ್ಕಿಂತ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಂತಹ ಸಿನಿಮಾಗಳನ್ನು ಮಾಡಲಿ. ಸೃಜನಶೀಲ ಮಾಧ್ಯಮ ದುರಂತಗಳಿಗೆ ಬಳಕೆ ಆಗಬಾರದು. ದುಡ್ಡು ಮಾಡುವುದಕ್ಕಾಗಿ ಈ ರೀತಿಯ ಸಿನಿಮಾಗಳನ್ನು ಮಾಡಬಾರದು ಎಂದು ಕಿಡಿಕಾರಿದ್ದಾರೆ.