Upendra : ನಟರು ಮಾಡಿದ್ದು ತಪ್ಪೇ…!! ಸರ್ಕಾರ ಮಾಡಿದ್ದು ಸರಿನಾ…?? ಉಪ್ಪಿ ಪ್ರಶ್ನೆ
ಇತ್ತೀಚೆಗೆ ನಟರು ತಂಬಾಕು ಜಾಹೀರಾತುಗಳಲ್ಲಿ ನಟಿಸಿದ್ದು ಭಾರೀ ಚರ್ಚೆಯಾಗ್ತಿದ್ದು , ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರದ ಸುದ್ದಿ ಭಾರೀ ಚರ್ಚೆಯಲ್ಲಿದೆ..
ನಟರು ತಂಬಾಕು ಆಡ್ ಗಳಲ್ಲಿ ಕಾಣಿಸಿಕೊಂಡಿದ್ದು ಎಷ್ಟು ಸರಿ ಎಂಬ ಬಗ್ಗೆಯೇ ಚರ್ಚೆಯಾಗ್ತಿದೆ.. ಈ ನಡುವೆ ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಪಾನ್ ಮಸಾಲಾ ಜಾಹೀರಾತಿನ ಒಪ್ಪಂದ ಕೈಬಿಟ್ಟಿದ್ದರು.. ಬಹಿರಂಗವಾಗಿಯೇ ಕ್ಷಮೆಯನ್ನೂ ಯಾಚಿಸಿದ್ದರು..
ಈ ಬಗ್ಗೆ ಟ್ವೀಟ್ ಮಾಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು “ ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು, ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸಾರಿ, ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ, ಯಾವತ್ತೂ ಅಪ್ಪ ಸರಿ, ಮಕ್ಕಳು ತಪ್ಪು” ಎಂದು ಬರೆದು ಸರ್ಕಾರವನ್ನ ಲೇವಡಿ ಮಾಡಿ , ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ..