Mrunal Thakur : ಬಾಡಿ ಶೇಮಿಂಗ್ ಗೆ ಗುರಿಯಾಗಿದ್ದರಂತೆ ಕ್ಯೂಟ್ ನಟಿ ಮೃನಾಲ್..!!!
ಕಿರುತೆರೆ ಮೂಲಕ ಹಿಟ್ ಆಗಿ ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ಮೃನಾಲ್ ಠಾಕುರ್ ಅವರ ನಟನೆಯ ಜೆರ್ಸಿ ಸಿನಿಮಾ ಸದ್ಯ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ.. ಮೃನಾಲ್ ತಮ್ಮ ಬ್ಯೂಟಿ ಮತ್ತೆ ಕ್ಯೂಟ್ ನೆಸ್ ನಿಂದಲೇ ಅಭಿಮಾನಿಗಳನ್ನ ಗಳಿಸಿದ್ದಾರೆ..
ಆದ್ರೆ ಮೃನಾಲ್ ಠಾಕುರ್ ಬಾಡಿ ಶೇಮಿಂಗ್ ಗೆ ಗುರಿಯಾಗಿದ್ದರಂತೆ.. ಪದೇ ಪದೇ ಬಾಡಿ ಶೇಮಿಂಗ್ ಗೆ ಗುರಿಯಾಗಿದ್ದಾಗಿ ಸಂದರ್ಶವೊಂದ್ರಲ್ಲಿ ಅವರೇ ಹೇಳಿಕೊಂಡಿದ್ಧಾರೆ..
ತನ್ನನ್ನು ‘ಮಟ್ಕಾ’ ಎಂದು ಕರೆಯುವ ಟ್ರೋಲ್ಗಳು ನನ್ನ ಚರ್ಮದ ಮೇಲೆ ವಿಶ್ವಾಸ ಹೊಂದುವುದನ್ನು ಎಂದಿಗೂ ತಡೆಯುವುದಿಲ್ಲ ಎಂದು ನಟಿ ಹೇಳಿದರು.
” ನನ್ನ ದೇಹದ ಮೇಲೆ ನನಗೆ ಹೆಮ್ಮೆಯಿದೆ.. ಆದ್ದರಿಂದ ಜನರು ನನ್ನನ್ನು ಮಟ್ಕಾ ಎಂದು ಕರೆದರೂ , ನನ್ನನ್ನು ಕೆಟ್ಟದಾಗಿ ಹೀಯಾಳಿಸಿದರೂ ನಾನು ಹೆಚ್ಚು ತಲೆ ಕರೆರಡಿಸಿಕೊಳ್ಳುವುದಿಲ್ಲ ” ಎಂದು ಹೇಳಿದರು.
“ಮೊದಲನೆಯದಾಗಿ, ಝೀರೋ ಫಿಗರ್ ಅನ್ನು ಹೊಂದಿರುವುದು ಅನಿವಾರ್ಯವಲ್ಲ. ನನ್ನ ಪ್ರಕಾರ ಫಿಟ್ ಆಗಿರುವುದು ಮುಖ್ಯ, ಅನಾರೋಗ್ಯಕರ ದೇಹವಲ್ಲ. ನಂತರ ಅದು ನಿಮ್ಮ ದೇಹ ಪ್ರಕಾರವನ್ನು ಅವಲಂಬಿಸಿರುತ್ತದೆ. ನಾವೆಲ್ಲರೂ ವಿಭಿನ್ನ ದೇಹ ಪ್ರಕಾರಗಳನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
Mrunal Thakur