The Kashmir Files : ಪುತ್ತೂರಿನ ಕಾಲೇಜಿನಲ್ಲಿ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ
ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರತಿಷ್ಠಿತ ಜೀ5ಗೆ ಒಟಿಟಿ ಸಂಸ್ಥೆ ಲಗ್ಗೆ ಇಡಲು ಸಜ್ಜಾಗಿದೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರ ಹತ್ಯೆ ಕುರಿತು ತಯಾರಿಸಿದ್ದ ಈ ಸಿನಿಮಾ ಬಾಕ್ಸಾಫೀಸ್ನ್ನು ಕೊಳ್ಳೆ ಹೊಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಜನಸಾಮಾನ್ಯರು ಸಿನಿಮಾ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಇತ್ತೀಚೆಗೆ ಪುತ್ತೂರಿನ ಕಾಲೇಜಿನಲ್ಲಿ ಕಾಶ್ಮೀರಿ ಪಂಡಿತರ ಮಕ್ಕಳಿಗಾಗಿ ಭರ್ಜರಿ ಘೋಷಣೆಯೊಂದನ್ನ ಮಾಡಲಾಗಿದೆ.. ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆರನೇ ತರಗತಿಯಿಂದ ಹಿಡಿದು ಪದವಿಯವರೆಗೆ ಉಚಿತ ಶಿಕ್ಷಣವನ್ನು ಒದಗಿಸುವ ಯೋಜನೆಯನ್ನು ನಟ್ಟೋಜ್ ಅವರು ರೂಪಿಸಿದ್ದಾರೆ. ಅವರು ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಸಹ ಘೋಷಿಸಿದ್ದಾರೆ.
ಈ ಸಂಸ್ಥೆಯಲ್ಲಿ ಒಬ್ಬ ವಿದ್ಯಾರ್ಥಿಯ ಶಿಕ್ಷಣದ ವೆಚ್ಚವು ಸುಮಾರು 80,000 ರೂಪಾಯಿಗಳಾಗಿದ್ದು, ಒದಗಿಸಬೇಕಾದ ಸೌಲಭ್ಯಗಳಿಗೆ ಒಂದು ವರ್ಷದಲ್ಲಿ 50,000 ರೂಪಾಯಿ ವೆಚ್ಚ ಆಗಬಹುದು. ಕಾಶ್ಮೀರಿ ಪಂಡಿತರ ಮಕ್ಕಳಿಗೆ ಇವೆಲ್ಲವನ್ನೂ ಉಚಿತವಾಗಿ ಒದಗಿಸಲಾಗುವುದು ಎಂದು ನಟ್ಟೋಜ್ ಅವರು ತಿಳಿಸಿದ್ದಾರೆ..
ಅಲ್ಲದೇ ಈಗಾಗಲೇ ಕಾಶ್ಮೀರಿ ಪಂಡಿತರ ನಾಲ್ಕು ಮಕ್ಕಳನ್ನು ಈ ಶಿಕ್ಷಣ ಸಂಸ್ಥೆಗೆ ಸೇರಿಸಿಕೊಳ್ಳಲಾಗಿದೆ ಎಂದು ಕೂಡ ನಟ್ಟೋಜ್ ಅವರು ತಿಳಿಸಿದ್ದಾರೆ..
ಅಂದ್ಹಾಗೆ ಕಾಶ್ಮೀರಿ ಪಂಡಿತರಿಗೆ ಶಿಕ್ಷಣ ಕೋಟಾ ನೀಡುತ್ತಿರುವ ಕರ್ನಾಟಕದ ಮೊದಲ ಕಾಲೇಜು ಇದಲ್ಲ. ಈ ಹಿಂದೆ, ರಾಜ್ಯದ ಕೆಲವು ಕಾಲೇಜುಗಳು ಸಹ ಕಾಶ್ಮೀರಿ ಪಂಡಿತರಿಗೆ ಕೋಟಾ ನೀಡಲು ಮುಂದೆ ಬಂದಿವೆ. ಕೇಂದ್ರ ಮಟ್ಟದಲ್ಲಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICET) ಕಾಶ್ಮೀರಿ ವಲಸಿಗರ ಮಕ್ಕಳಿಗೆ ಮತ್ತು ಕಣಿವೆಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಅಥವಾ ಹಿಂದೂ ಕುಟುಂಬಗಳಿಗೆ ಕಾಲೇಜು ಪ್ರವೇಶದಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ.
2020 ರಲ್ಲಿ ಹೊರಡಿಸಲಾದ ನೋಟಿಸ್ನಲ್ಲಿ ಈ ವಿದ್ಯಾರ್ಥಿಗಳಿಗೆ ಶೇಕಡಾ 10 ರವರೆಗೆ ಕಟ್-ಆಫ್ ನಲ್ಲಿ ವಿನಾಯಿತಿ ನೀಡಲಾಗುವುದು. ಪ್ರತಿ ಕೋರ್ಸ್ನಲ್ಲಿ ಸೀಟುಗಳ ಸಂಖ್ಯೆಯನ್ನು ಶೇಕಡಾ 5 ರವರೆಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.
The Kashmir Files : free education to Kashmir pandith’s childrens