The Kashmir Files ಸಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಅಂದ್ಹಾಗೆ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಒಟಿಟಿಯಲ್ಲೂ ಸಿನಿಮಾದ್ದೇ ಅಬ್ಬರವಾಗಿದೆ.. ಮೇ 13 ರಂದು ಒಟಿಟಿಯಲ್ಲಿ ರಿಲೀಸ್ ಆಗಿ ಅಲ್ಲಿಯೂ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.
ಜೀ5 ನಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ. ಕೇವಲ ಒಂದು ವಾರದಲ್ಲಿಯೇ 20 ಲಕ್ಷಕ್ಕೂ ಅಧಿಕ ಜನ ಜೀ5ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಜೀ5ನಲ್ಲಿ 20 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿರುವ ಕುರಿತು ಮಾತನಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜೀ5 ನಲ್ಲಿ ರಿಲೀಸ್ ಆದ ನಮ್ಮ ಸಿನಿಮಾಗೆ ಭರ್ಜರಿ ವೀವ್ಸ್ ಸಿಕ್ಕಿದೆ. ಜನರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಉತ್ತಮ ಸ್ಪಂದನೆ ನೀಡಿದ್ದಾರೆ. ಇದು ಒಂದು ದೊಡ್ಡ ಸಾಧನೆ. ನಮ್ಮ ಚಿತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಸಂತಸಪಟ್ಟಿದ್ದಾರೆ..