ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಇನ್ನೇನು ಶೀಘ್ರವೇ ತೆರೆಗಪ್ಪಳಿಸಲಿದೆ.. ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.. ಅಂದ್ಹಾಗೆ ಈ ಸಿನಿಮಾದ ಟ್ರೇಲರ್ ವಿಶೇಷವಾಗಿ ಬಿಡುಗಡೆಯಾಗಲಿದೆ..
ಮಾರ್ಕೆಟಿಂಗ್ ಸ್ಟ್ರಾಟಜಿಯ ಮೇಲೆ ಗಮನ ಹರಿಸಿರುವ ಸಿನಿಮಾ ತಂಡವು KGF 2 ಹಾದಿಯನ್ನೇ ಅನುಸರಿಸಿ IPL ನ ಕ್ರೇಜ್ ನ ತನ್ನ ಸ್ಟ್ರೆಂತ್ ಮಾಡಿಕೊಳ್ತಿದೆ..
ಹೌದು.. ಮೇ 29ರಂದು ನಡೆಯಲಿರುವ ಐಪಿಎಲ್ ಅಂತಿಮ ಪಂದ್ಯವನ್ನು ಅಮೀರ್ ಖಾನ್ ಆಯೋಜಿಸಲಿದ್ದಾರೆ. ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಸ್ಟ್ರಾಟೆಜಿಕ್ ಟೈಮ್ ಔಟ್ನಲ್ಲಿ ಅವರ ‘ಲಾಲ್ ಸಿಂಗ್ ಚಡ್ಡಾ’ ಟ್ರೇಲರ್ ಅನ್ನು ಅನಾವರಣಗೊಳಿಸಲಿದ್ದಾರೆ.
ಇದನ್ನು ದೃಢೀಕರಿಸಿ ಚಿತ್ರದ ನಿರ್ಮಾಪಕರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಟ್ರೇಲರ್ ಬಿಡುಗಡೆ ಮಾಡುವುದನ್ನು ಘೋಷಿಸಿದ್ದಾರೆ.
ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ ‘ಲಾಲ್ ಸಿಂಗ್ ಚಡ್ಡಾ’ದಲ್ಲಿ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ನಟಿಸಿದ್ದಾರೆ.
1994ರ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ‘ಫಾರೆಸ್ಟ್ ಗಂಪ್’ ನ ಹಿಂದಿ ರಿಮೇಕ್ ಆಗಿರುವ ಈ ಸಿನಿಮಾವನ್ನ ಈ ಹಿಂದೆ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರ ನಿರ್ದೇಶಿಸಿದ್ದ ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.
ಅಂದ್ಹಾಗೆ ಈ ಸಿನಿಮಾವನ್ನ ಏಪ್ರಿಲ್ 14 ರಂದು ರಿಲೀಸ್ ಮಾಡುವ ಪ್ಲಾನ್ ನಲ್ಲಿತ್ತು ಸಿನಿಮಾ ತಂಡ .. ಆದ್ರೆ KGF 2 ಕ್ರೇಜ್ ಗೆ ಬೆದರಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಲಾಗಿತ್ತು..