ಎಸ್ ಎಸ್ ರಾಜಮೌಳಿ ನಿರ್ದೇಶಕದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಇದೇ 20ರಂದು ಜೀ5 ಒಟಿಟಿಗೆ ಲಗ್ಗೆ ಇಡ್ತಿದೆ. ವಿಶ್ವ ಬಾಕ್ಸಾಫೀಸ್ನಲ್ಲಿ ನಲ್ಲಿ ನಯಾ ರೆಕಾರ್ಡ್ ಬರೆದಿದ್ದ ತ್ರಿಬಲ್ ಆರ್ ಸಿನಿಮಾದಲ್ಲಿ ರಾಮ್-ಭೀಮ್ ಖದರ್ ನಲ್ಲಿ ರಾಮ್ಚರಣ್ ಹಾಗೂ ಜೂ.ಎನ್ಟಿಆರ್ ಜೋಡಿ ಕಮಾಲ್ ಮಾಡಿತ್ತು. ಬರೋಬ್ಬರಿ 1000ಕ್ಕೂ ಹೆಚ್ಚು ಕೋಟಿ ಹಣ ಲೂಟಿ ಮಾಡಿರುವ ರೌದ್ರ, ರಣ, ರುಧೀರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲಾಗದವರು ಈಗ ಮನೆಯಲ್ಲಿಯೇ ಕುಳಿತು ನೋಡುವ ಅವಕಾಶವನ್ನು ಜೀ5 ಒಟಿಟಿಗೆ ಒದಗಿಸಿದೆ.
ವಿಶ್ವಾದ್ಯಂತ ರೂ. 1100 ಕೋಟಿಗೂ ಅಧಿಕ ಆದಾಯ ಗಳಿಸಿದೆ ಈ ಸಿನಿಮಾ.
ವಿಷುಯಲ್ ಎಫೆಕ್ಟ್, ಮ್ಯೂಸಿಕ್, ಆ್ಯಕ್ಟಿಂಗ್ ಹೀಗೆ ಎಲ್ಲಾ ವಿಷಯದಲ್ಲೂ ಫಸ್ಟ್ ಕ್ಲಾಸ್ ಇರುವ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಝೀ ಫೈವ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಸ್ಪ್ರೀಮ್ ಆಗುತ್ತಿದೆ.
ಇತ್ತೀಚೆಗಷ್ಟೇ ಸಿನಿಮಾ ನೋಡಿದ ಹಾಲಿವುಡ್ ನಟ ಪ್ಯಾಟನ್ ಓಸ್ವಾಲ್ಡ್, ಸಿನಿಮಾ ನಿರ್ದೇಶಕ ಎಸ್ ಎಸ್ ರಾಜಮೌಳಿ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಎಲ್ಲರೂ ನೋಡಲೇಬೇಕಾದ ಸಿನಿಮಾ ಇದಾಗಿದೆ. “RRR ಚಲನಚಿತ್ರವು ನಿಮ್ಮ ಹತ್ತಿರದ ಥಿಯೇಟರ್ನಲ್ಲಿ ಪ್ಲೇ ಆಗುತ್ತಿಲ್ಲವಾದರೆ, ಅದನ್ನು ಈಗಲೇ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಿ.” ಆರ್ ಆರ್ ಆರ್ ಸಿನಿಮಾ ಅದ್ಭುತವಾಗಿದೆ.
ಸಿನಿಮಾವನ್ನು ರಾಜಮೌಳಿ ತೆರೆಗೆ ಬಂದಿರುವ ವಿಧಾನ, ಕಥೆಯನ್ನ ಹೇಳಿರುವ ರೀತಿ ಸೂಪರ್ ಆಗಿದೆ. ಇನ್ಮುಂದೆ ನಿಮ್ಮನ್ನ ಸಿನಿಮಾ ಮಾಡಲು ಅವಕಾಶ ನೀಡಕೂಡದು, ನಿಮ್ಮ ಮುಂದಿನ ಸಿನಿಮಾಗಾಗಿ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ.