ಇಂಜೂರಿ ಸಮಸ್ಯೆಯಿಂದ ದೂರವಾಗಿರುವ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಸರ್ಜರಿಗಾಗಿ ಪ್ರೇಯಸಿ ಅಥಿಯಾ ಶೆಟ್ಟಿ ಜೊತೆ ಜರ್ಮಿನಿಗೆ ಹಾರಿದ್ದಾರೆ.
ಜೋಡಿ ಹಕ್ಕಿಗಳಿಬ್ಬರು ಏರ್ ಪೋರ್ಟ್ ಗೆ ಆಗಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಥಿಯಾ ಶೆಟ್ಟಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿಯಾಗಿದ್ದು, ಕೆ.ಎಲ್.ರಾಹುಲ್ ಜೊತೆ ಡೇಟಿಂಗ್ ನಲ್ಲಿರುವುದು ಗೊತ್ತಿರುವ ವಿಚಾರವೇ.
ಈ ಇಬ್ಬರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಇನ್ನು ಈ ಇಬ್ಬರು ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಬ್ಬರಿಸಿದ್ದ ಕೆ.ಎಲ್.ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಆಯ್ಕೆ ಆಗಿದ್ದರು.
ಆದ್ರೆ ಪ್ರಾಕ್ಟೀಸ್ ವೇಳೆ ತೊಡೆಯ ಗಾಯಕ್ಕೆ ತುತ್ತಾದ ಕಾರಣ ಅವರು ಸರಣಿಯಿಂದ ದೂರ ಉಳಿದರು.
ವೈದ್ಯರ ಸಲಹೆ ಮೇರೆಗೆ ಕೆ.ಎಲ್. ಇದೀಗ ಜರ್ಮಿನಿಗೆ ಹೊರಟ್ಟಿದ್ದಾರೆ.