Kannada Films : ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಜಾತ್ರೆ – ನಾಳೆ ಯಾವೆಲ್ಲಾ ಸಿನಿಮಾಗಳು ರಿಲೀಸ್…!!!
ಕೋವಿಡ್ ಕಾಟದಿಂದ ಡಲ್ ಆಗಿದ್ದ ಸಿನಿಮಾರಂಗ ಈಗೊಂದು ವರ್ಷದಿಂದ ಪುನಃ ಚೇತರಿಸಿಕೊಂಡಿದೆ… ಎಲ್ಲಾ ಇಂಡಸ್ಟ್ರಿಯಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತಿದೆ.. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಹೊಸಬರ ಸಿನಿಮಾಗಳು ಮೋಡಿ ಮಾಡ್ತಿವೆ…
ಅಂದ್ಹಾಗೆ ಇನ್ನೂ ಕನ್ನಡದ ಹಲವಾರು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ… ಸ್ಯಾಂಡಲ್ ವುಡ್ ನಲ್ಲಿ ಜುಲೈ 15 ಕ್ಕೆ ಸಿನಿಮಾಗಳ ಜಾತ್ರೆ ನಡೆಯಲಿದೆ… ಸಾಲು ಸಾಲು ಕನ್ನಡದ ಸಿನಿಮಾಗಳು ರಿಲೀಸ್ ಆಗುತ್ತಿವೆ.. ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಲಿವೆ.. ಪಟ್ಟಿ ಇಲ್ಲಿದೆ…
ಪೆಟ್ರೋಮ್ಯಾಕ್ಸ್
ಬಹುನಿರೀಕ್ಷೆಯ ಸತೀಶ್ ನಿನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಜುಲೈ 15 ಕ್ಕೆ ರಿಲೀಸ್ ಆಗಲಿದೆ..
ಈ ಸಿನಿಮಾದಲ್ಲಿ ಸತೀಶ್ ಜೊತೆ ಹರಿಪ್ರಿಯಾ, ಕಾರುಣ್ಯ ರಾಮ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ…
ಗಾರ್ಗಿ
ಮತ್ತೊಂದೆಡೆ ಸಾಯಿ ಪಲ್ಲಲವಿ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಗಾರ್ಗಿ ಸಹ ರಿಲೀಸ್ ಆಗ್ತಿದೆ.. ಈ ಸಿನಿಮಾ ಮೂಲಕ ಸಾಯಿ ಪಲ್ಲವಿ ಸ್ಯಾಂಡಲ್ ವುಡ್ ಗೂ ಪಾದಾರ್ಪಣೆ ಮಾಡ್ತಿದ್ದಾರೆ..
ಓ ಮೈ ಲವ್
ಶ್ರೀನು ನಿರ್ದೇಶನದ ಓ ಮೈ ಲವ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ… ಈ ಸಿನಿಮಾದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ.
ಪದ್ಮಾವತಿ
ಮಿಥುನ್ ಚಂದ್ರಶೇಖರ್ ನಿರ್ದೇಶನ, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ ಸಿನಿಮಾ ಕೂಡ ರಿಲೀಸ್ ಆಗ್ತಿದೆ..
ಹುಡುಗಿ
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಲಡಕಿ’ ಸಿನಿಮಾ ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.. ಸಿನಿಮಾಗೆ ಕನ್ನಡದಲ್ಲಿ ‘ಹುಡುಗಿ’ ಎಂದು ಟೈಟಲ್ ಇಡಲಾಗಿದೆ…