Vikrant Rona Twitter Review : ಪ್ರೇಕ್ಷಕರು ಕಿಚ್ಚನ ಸಿನಿಮಾ ಬಗ್ಗೆ ಹೇಳುತ್ತಿರೋದೇನು..??
ಕೊನೆಗೂ ದೇಶಾದ್ಯಂತ ಕಿಚ್ಚನ ಹವಾ ಶುರುವಾಗಿಬಿಟ್ಟಿದೆ.. ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ಅಬ್ಬರ ಆರಂಭವಾಗಿದೆ… 7 ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 50 ದೇಶಗಳಲ್ಲಿ ‘ವಿಕ್ರಾಂತ್ ರೋಣ’ 3ಡಿ , 2ಡಿ ಎರೆಡೂ ವರ್ಷನ್ ಗಳಲ್ಲಿ ರಿಲೀಸ್ ಆಗಿದೆ..
ಈಗಾಗಲೇ ಸಿನಿಮಾದ ರಿವ್ಯೂ-ವ್ ಗಳು ಹೊರಬಂದಿದೆ.. ಅಂತೆಯೇ ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ರಿವ್ಯೂವ್ ಗಳು ಸಹ ಬರುತ್ತಿದೆ..
ಉತ್ತಮ ತಾಂತ್ರಿಕ ಕೆಲಸಗಳೊಂದಿಗೆ ಆಸಕ್ತಿದಾಯಕ ಕಥೆಯನ್ನು ಆಕರ್ಷಕವಾಗಿ ಹೇಳಲಾಗಿದೆ. ಸುದೀಪ್ ಅದ್ಭುತವಾಗಿ ಮಾಡಿದ್ದಾರೆ. ಕೆಲವು ದೃಶ್ಯಗಳನ್ನು ಟ್ರಿಮ್ ಮಾಡಬಹುದಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನೋಡಬಹುದಾದಂತ ಉತ್ತಮ ಚಿತ್ರವಾಗಿದೆ ಎಂದಿದ್ದಾರೆ ವೆಂಕಿ ರೀವಿವ್ಯೂ
ರೇಟಿಂಗ್: 4
#VikrantRona ಭಾರತದ ಅತ್ಯುತ್ತಮ 3D ಚಲನಚಿತ್ರಗಳಲ್ಲಿ ಒಂದು. ಸಸ್ಪೆನ್ಸ್ನೊಂದಿಗೆ ಬೆಸ್ಟ್ ಥ್ರಿಲ್ ನೀಡುತ್ತದೆ. ಪೈಸಾ ವಸೂಲ್ ಅನುಭವ,,, ಕನ್ನಡ ಇಂಡಸ್ಟ್ರಿ ಮತ್ತೊಂದು ಹಂತದಲ್ಲಿದೆ ಎಂದು ರಾಕೇಶ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಚಿತ್ರವನ್ನ ನೋಡಿ ಹೊಗಳಿದ್ದಾರೆ.3Dಯಲ್ಲಿ ವಿಕ್ರಾಂತ್ ರೊಣ ಚಿತ್ರದ ಅನುಭವ ಅಧ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾನು ನಿನ್ನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ ಸಹೋದರ ಎಂದು ನಟ ರಿತೇಶ್ ಬರೆದುಕೊಂಡಿದ್ದಾರೆ.
ಇನ್ನೂ ವಿಕ್ರಾಂತ್ ರೋಣ ಚಿತ್ರಕ್ಕೆ ಘಟಾನುಘಟಿಗಳು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಪ್ರಯೋಗಗಳನ್ನು ಮಾಡುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ವಿಶ್ಯುವಲ್ಸ್ ಅದ್ಭುತವಾಗಿದೆ. ಸುದೀಪ್ ಹಾಗೂ ಅವರ ತಂಡಕ್ಕೆ ನನ್ನ ಶುಭಾಶಯ’ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ತಮಿಳು ನಟ ಕಾರ್ತಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅದ್ಭುತ ಟ್ರೈಲರ್ ನಂತರ ವಿಕ್ರಾಂತ್ ರೋಣ ನನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ. ಅಭಿನಂದನೆಗಳು ಕಿಚ್ಚ ಸುದೀಪ್ ಸರ್ ಮತ್ತು ಅದ್ಭುತ ತಂಡ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ!