Ramcharan : James Bond ಪಾತ್ರಕ್ಕೆ ರಾಮ್ ಚರಣ್ ಹೆಸರು ಸೂಚಿಸಿದ ‘ಡೇನಿಯಲ್ ಕ್ರೇಗ್’
ಕಳೆದ ವರ್ಷ ಬಿಡುಗಡೆಯಾದ ಹಾಲಿವುಡ್ ಚಿತ್ರ ನೋ ಟೈಮ್ ಟು ಡೈ ಸಿನಿಮಾದ ನಂತರ ಬ್ರಿಟಿಷ್ ನಟ ಡೇನಿಯಲ್ ಕ್ರೇಗ್ ಅವರ ಜೇಮ್ಸ್ ಬಾಂಡ್ ಸರಣಿಯ ಒಪ್ಪಂದ ಅಂತ್ಯಗೊಂಡಿದೆ. ಹಾಗಾಗಿ ಹೊಸ 007 ಅಂದರೆ ಜೇಮ್ಸ್ ಬಾಂಡ್ ಚಿತ್ರಕ್ಕಾಗಿ ಹುಡುಕಾಟ ಆರಂಭವಾಗಿದೆ.
ಇದೀಗ ಹಾಲಿವುಡ್ ನಟ ಚಿಯೋ ಹೋದರಿ ಕೋಕರ್ ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ ಹೆಸರನ್ನ ಜೇಮ್ಸ್ ಬಾಂಡ್ ಪಾತ್ರಕ್ಕೆ ಸೂಚಿಸಿದ್ದಾರೆ. SS ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ರಾಮ್ ಚರಣ್ ಅವರ ಅಭಿನಯವು ಜಾಗತಿಕ ಮೆಚ್ಚುಗೆಯನ್ನ ಪಡೆದಿತ್ತು. ಇದೀಗ ರಾಮ್ ಚರಣ್ ಅಭಿನಯ ಹಾಲಿವುಡ್ ಸಿನಿಮಾ ತಯಾರಕರನ್ನೂ ಸೆಳೆದಿದೆ.
ಜೇಮ್ಸ್ ಬಾಂಡ್ ನ ಮುಂದಿನ ಭಾಗಕ್ಕೆ ರಾಮ್ ಚರಣ್ ಉತ್ತಮ ಸ್ಪರ್ಧಿಯಾಗಬಹುದೆಂಬ ಕಲ್ಪನೆಯನ್ನ ಟ್ವೀಟರ್ ನಲ್ಲಿ ತೇಲಿಬಿಟ್ಟಿದ್ದಾರೆ ನಟ ಚಿಯೋ ಹೋದರಿ ಕೋಕರ್. ಮುಂದಿನ ಜೇಮ್ಸ್ ಬಾಂಡ್ಗೆ ಹಲವಾರು ಹೆಸರುಗಳನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ಇದ್ರಿಸ್ ಎಲ್ಬಾ ನಟ ಸೋಪ್, ನಟ ಮ್ಯಾಥ್ಯೂ ಗೂಡೆ, ನಟ ಡ್ಯಾಮ್ಸನ್ ಮತ್ತು ರಾಮ್ ಚರಣ್ ಹೆಸರನ್ನ ಸೂಚಿಸಿದ್ದಾರೆ.