ಬಾಲಿವುಡ್ ನ ವರ್ಸಟೈಲ್ ನಟಿ ವಿದ್ಯಾ ಬಾಲನ್ ಬಗ್ಗೆ ಪ್ರತ್ಯೇಕವಾಗಿ ಹೇಳೋದೇ ಬೇಡ.. ಗ್ಲಾಮರಸ್ ಇರಲಿ , ಡಿ ಗ್ಲಾಮ್ ಇರಲಿ , ರೆಬಲ್ ಇರಲಿ , ಬಬ್ಲಿ ಪಾತ್ರವಿರಲಿ,, ಅದೆಂಥಹದ್ದೇ ಪಾತ್ರವಿರಲಿ ,,, ಎಲ್ಲಾ ಪಾತ್ರಗಳಲ್ಲೂ ಮಿಂಚಿ ಸೈ ಎನಿಸಿಕೊಳ್ಳುವ ನಟಿ..
ಸಾಕಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಜನಮನಗೆದ್ದಿರುವ ವಿದ್ಯಾ ಬಾಲನ್ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿರೋದು ಕಡಿಮೆಯೇ ಆದ್ರೂ , ಸಿನಿಮೇತ್ತರ ವಿಚಾರಗಳಿಂದ ಸಾಕಷ್ಟು ಚರ್ಚೆಯಲ್ಲೇ ಇರುತ್ತಾರೆ.. ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರಣವೀರ್ ಸಿಂಗ್ ಪರ ಮಾತನಾಡಿ ಸುದ್ದಿಯಲ್ಲಿದ್ದರು..
ಈಗ ತಮ್ಮ ಫ್ಯಾಷನ್ ಸೆನ್ಸ್ ಲುಕ್ ವಿಚಾರದಿಂದ ಚರ್ಚೆಯಾಗ್ತಿದ್ದಾರೆ.. ಮನೀಷ್ ಮಲ್ಹೋತ್ರಾ ಅವರ ಫ್ಯಾಷನ್ ಶೋನಲ್ಲಿ ವಿದ್ಯಾ ಬಾಲನ್ ಅವರು ಬ್ಲಿಂಗಿ ಸೀರೆಯಲ್ಲಿ ಸಖತ್ ಗರ್ಜಿಯಸ್ ಾಗಿ ಕಾಣಿಸಿಕೊಂಡಿದ್ದಾರೆ..
ಮುಂಬೈನಲ್ಲಿ ನಡೆದ ಮನೀಶ್ ಮಲ್ಹೋತ್ರಾ ಅವರ ಕೌಚರ್ ಶೋನಲ್ಲಿ ವಿದ್ಯಾ ಬಾಲನ್ ತಮ್ಮ ಹೊಳೆಯುವ ಕಪ್ಪು ಸೀರೆಯಲ್ಲಿ ದರ್ಶನ ನೀಡಿದ್ದು ಕಾರ್ಯಕ್ರಮದಲ್ಲಿ ಹೈಲೇಟ್ ಆಗಿದ್ದಾರೆ.. ಪತಿ ಮತ್ತು ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರೊಂದಿಗೆ ಈವೆಂಟ್ ನಲ್ಲಿ ಭಾಗಿಯಾಗಿದ್ದರು..