Liger Song Out – ಆಫತ್ ನಲ್ಲಿ ವಿಜಯ್, ಅನನ್ಯಾ ರೊಮ್ಯಾಂಟಿಕ್ ಮೋಡಿ…!
ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಚಿತ್ರದ ‘ಆಫತ್’ ಹಾಡು ಕೊನೆಗೂ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಈ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ, ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಮೊದಲ ಭಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.
ತನಿಷ್ಕ್ ಬಾಗ್ಚಿ ಮತ್ತು ಜಹ್ರಾ ಖಾನ್ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾಗಿದ್ದಾರೆ. ಲೈಗರ್ ತಯಾರಕರು ಶುಕ್ರವಾರ ಸಂಜೆ 4 ಗಂಟೆಗೆ ‘ಅಫತ್’ ಹಾಡನ್ನು ಬಿಡುಗಡೆ ಮಾಡಬೇಕಿತ್ತು. ಆದ್ರೆ ತಾಂತ್ರಿಕ ದೋಷದಿಂದಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಹಾಡು ರಿಲೀಸ್ ಆಗಿದೆ. ಈ ಕುರಿತು ನಿರ್ದೇಶಕ ಪುರಿ ಟ್ವಿಟ್ ಕೂಡ ಮಾಡಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಲೈಗರ್ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ಮೂಲಗಳ ಪ್ರಕಾರ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಲಾಗಿದೆ. ಚಿತ್ರದ ರನ್ ಟೈಮ್ 2 ಗಂಟೆ 20 ನಿಮಿಷಗಳು ಎನ್ನಲಾಗಿದೆ. ಇದರಲ್ಲಿ ಮೊದಲಾರ್ಧ 1 ಗಂಟೆ 15 ನಿಮಿಷಗಳು ಮತ್ತು ದ್ವಿತೀಯಾರ್ಧ 1 ಗಂಟೆ 5 ನಿಮಿಷಗಳು. ಚಿತ್ರದಲ್ಲಿ ಏಳು ಪೈಟ್ ಸೀಕ್ವೆನ್ಸ್ ಗಳು ಮತ್ತು ಆರು ಹಾಡುಗಳಿವೆ ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ತಿಳಿಸಿವೆ. ಅದೇನೆಂದರೆ, ಚಿತ್ರದ ಇನ್ನೂ ಮೂರು ಹಾಡುಗಳು ಬಿಡುಗಡೆಯಾಗಬೇಕಿದೆ.
ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳದೊಂದಿಗೆ ಲೈಗರ್ ಆಗಸ್ಟ್ 25 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.