Rashmika – Kruthi Shetty : ನಿತಿನ್ ಸಿನಿಮಾದಿಂದ ರಶ್ಮಿಕಾಗೆ ಗೇಟ್ ಪಾಸ್ , ಕೃತಿ ಶೆಟ್ಟಿ ಫಿಕ್ಸ್..!!
ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿದೆ.. ಅವರು ಯಾವ ಸಿನಿಮಾ ಮಾಡಿದ್ರೂ ಹಿಟ್… ಆದ್ರೆ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದ್ದು ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ.. ಅದು ಬಿಟ್ರೆ ರಶ್ಮಿಕಾ ಟಾಲಿವುಡ್ , ಕಾಲಿವುಡ್ , ಮಾಲಿವುಡ್ , ಬಾಲಿವುಡ್ ಎಲ್ಲಾ ಇಂಡಸ್ಟ್ರಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಗಳ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.. ಇನ್ನೂ ಹಲವಾರು ಪ್ರಾಜೆಕ್ಟ್ ಗಳು ಅವರ ಬಳಿ ಇದೆ..
ಇದೀಗ ರಶ್ಮಿಕಾಗೆ ಅದೃಷ್ಟ ಕೈಕೊಟ್ಟಿರುವಂತೆ ಕಾಣ್ತಿದೆ.. ಟಾಲಿವುಡ್ ನಿತಿನ್ ನಟನೆಯ ‘ಮಾಚರ್ಲ ನಿಯೋಜಕವರ್ಗಂ’ ಸಿನಿಮಾಗೆ ಮೊದಲು ರಶ್ಮಿಕಾ ಆಯ್ಕೆ ಆಗಿದ್ದರು. ಆದರೆ ಈಗ ರಶ್ಮಿಕಾ ಜಾಗಕ್ಕೆ ಉಪ್ಪೇನ ಖ್ಯಾತಿಯ ಕೃತಿ ಶೆಟ್ಟಿ ರೀಪ್ಲೇಸ್ ಆಗಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ಡೇಟ್ಸ್ ಹೊಂದಾಣಿಕೆ ಆಗದೇ ಸಿನಿಮಾವನ್ನ ರಶ್ಮಿಕಾ ಕೈ ಬಿಟ್ಟಿದ್ದಾರೆ ಎನ್ನಲಾಗ್ತಿದೆ.