ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳಿನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚುತ್ತಿದ್ದಾರೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ.. ಅಂದ್ಹಾಗೆ ಈ ಸಿನಿಮಾದಲ್ಲಿ ರಜನಿಕಾಂತ್ ಗೆ ಐಶ್ವರ್ಯ ನಾಯಕಿ ಎನ್ನಲಾಗಿತ್ತು.. ಅವರ ಜಾಗಕ್ಕೆ ತಮನ್ನಾರನ್ನ ಕರೆತರಲಾಗಿದೆ ಎಂಬ ವದಂತಿ ಸಾಕಷ್ಟು ಸೌಂಡ್ ಮಾಡ್ತಿದೆ..
ಇದೆಲ್ಲದರ ನಡುವೆ ಈ ಸಿನಿಮಾದಲ್ಲಿ ನಾಲ್ಕು ಮಂದಿ ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸೌಂಡ್ ಮಾಡ್ತಿದೆ.. ಅಂದ್ಹಾಗೆ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.. ದೀಗ ಅವರ ಅಭಿಮಾನಿಗಳಿಗೆ ಯುವ ನಿರ್ದೇಶಕ ನೆಲ್ಸನ್ ನಿರ್ದೇಶನದ ಜೈಲರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ..
ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಮಾಸ್ಟರ್ ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಶೂಟಿಂಗ್ ಹಂತದಲ್ಲಿದೆ..
ಮೂಲಗಳ ಪ್ರಕಾರ ಜೈಲರ್ ಚಿತ್ರದಲ್ಲಿ ರಜಿನಿಕಾಂತ್ ಜೊತೆಗೆ ನಟಿ ರಮ್ಯಾ ಕೃಷ್ಣನ್ ನಟಿಸಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇಲ್ಲಿ ಸ್ವಾರಸ್ಯಕರ ಸಂಗತಿಯೆಂದ್ರೆ ಈ ಸಿನಿಮಾದಲ್ಲಿ ಶಿವಣ್ಣ ವಿಲ್ಲನ್ ಎನ್ನಲಾಗ್ತಿದೆ.. ಹೌದು.. ಸದಾ ಹೀರೋ ಆಗಿ , ಅನೇಕರ ರೋಲ್ ಮಾಡಲ್ ಆಗಿರೋ ಶಿವಣ್ಣ ವಿಲ್ಲನ್ ಪಾತ್ರ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳನ್ನ ಕಾಡ್ತಿದೆ..
ಇನ್ನೂ ಪ್ರಿಯಾಂಕಾ ಮೋಹನ್ ಮತ್ತು ಐಶ್ವರ್ಯ ರೈ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ತಮನ್ನಾ ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ.. ಹಾಗಾದ್ರೆ ತಮನ್ನಾ ಐಶ್ವರ್ಯಾಗೆ ಪರ್ಯಾಯವಾಗಿ ಬಂದಿಲ್ಲ ಬದಲಾಗಿ ಐಶ್ವರ್ಯ ಜೊತೆಗೆ ಇವರೂ ನಟಿಸುವ ಸಾಧ್ಯತೆ ಇದೆ… ಆದ್ರೆ ಯಾವುದೂ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ..