BiggBoss Ott : ನಂದಿನಿ ತಂಟೆಗೆ ಬಂದ ಸೋನುಗೆ ಮಸ್ತ್ ಜವಾಬ್ ಕೊಟ್ಟ ಜಶ್ವಂತ್..!!
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು. ಈ ಬಾರಿ ಮನೆಯ ಹೈಲೇಟ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ… ಆರಂಭದಿಂದಲೂ ಮನೆಯ ಹೈಲೇಟ್ ಆಗಿದ್ದಾರೆ.. ಸ್ಪೂರ್ತಿ ಗೌಡ ಸೋನು ಗೌಡ ನಡುವೆ ರಾಕೇಶ್ ವಿಚಾರಕ್ಕೆ ಕೋಲ್ಡ್ ವಾರ್ ನಡೆಯುತ್ತಿರುವುದು ಗೊತ್ತೇ ಇದೆ..
ಇತ್ತ ಸೋನು , ಸ್ಪೂರ್ತಿ , ರಾಕಿ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ಗಾಸಿಪ್ ಬೆನ್ನಲ್ಲೇ ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಸೋನು ಹೇಳಿಕೊಂಡಿದ್ದು ಮತ್ತಷ್ಟು ಶಾಕಿಂಗ್..
ಇದೆಲ್ಲದರ ನಡುವೆ ಈಗ ಸೋನು ನಂದಿನಿ ತಂಟೆಗೆ ಹೋಗಿದ್ದ ನಂದಿನಿ ಬಾಯ್ ಫ್ರೆಂಡ್ ಜಶ್ವಂತ್ ಸೋನು ವಿರುದ್ಧ ಕಿಡಿಕಾರಿದ್ದಾರೆ..
ದೊಡ್ಮನೆಯಲ್ಲಿ ಎರಡನೇ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮ್ಯೂಸಿಕ್ ಚೇರ್ ರೀತಿಯೇ ಒಂದು ಗೇಮ್ ನಡೆದಿತ್ತು. ಈ ಗೇಮ್ ನಲ್ಲಿ ಸೋನುಗೆ ಒಂದು ಲೆಟರ್ ಸಿಕ್ಕಿದೆ. ಈ ಲೆಟರ್ ಮೂಲಕ ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ನಾನು ನಂದು ಅವರನ್ನು ನಾಮಿನೇಟ್ ಮಾಡುತ್ತೇನೆ. ಅವರು ಸಖತ್ ಆಗಿ ಆಡುತ್ತಾರೆ. ನನಗೆ ಟಫ್ ಕಾಂಪಿಟೇಟರ್ ಅನಿಸಿತು. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡೆ ಎಂದು ಕಾರಣ ನೀಡಿದ್ದಾರೆ..
ಬಳಿಕ ಮತ್ತೊಂದು ಆಟದಲ್ಲಿ ಗೆದ್ದು ಜಶ್ವಂತ್ ಅವರು ಸೋನು ಅವರನ್ನು ನಾಮಿನೇಟ್ ಮಾಡುವ ಮೂಲಕ ಮುಯಿಗೆ ಮುಯಿ ತೀರಿಸಿಕೊಂಡಿದ್ದಾರೆ..
ಅಷ್ಟೇ ಅಲ್ಲ ಸೋನುರನ್ನ ನಾಮಿನೇಟ್ ಮಾಡಲು ಜಶ್ವಂತ್ ನೀಡಿರುವ ಕಾರಣ , ಸೋನು ಅವರು ಮನೆಯವರೊಂದಿಗೆ ಜೊತೆ ಬೆರೆಯುತ್ತಿಲ್ಲ. ಇದರ ಜತೆಗೆ ಅವರು ನನ್ನ ಗರ್ಲ್ಫ್ರೆಂಡ್ ಅನ್ನು ನಾಮಿನೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದಿದ್ದಾರೆ..