Priyamani : ಪ್ರಿಯಾಮಣಿ ದಾಂಪತ್ಯದಲ್ಲಿ ಬಿರುಕು..?? ಡಿವೋರ್ಸ್ ವದಂತಿಗೆ ನಟಿ ಸ್ಪಷ್ಟನೆ..
ಕನ್ನಡ , ತೆಲುಗು , ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ಅವರು ಸದ್ಯ ಸಿನಿಮಾಗಳಲ್ಲಿ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಇದೀಗ ತಮ್ಮ ವಯಕ್ತಿಕ ವಿಚಾರದಿಂದಾಗಿ ಸುದ್ದಿಯಲ್ಲಿದ್ದಾರೆ… ಪ್ರಿಯಾಮಣಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹರಿದಾಡ್ತಿದೆ..
ಪತಿ ಮುಸ್ತಾಫ್ ಜೊತೆಗೆ ಮನಸ್ತಾಪವಿದ್ದು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ವದಂತಿ ಹರಿದಾಡ್ತಿದೆ.. ಆದ್ರೆ ಈ ವದಂತಿಗೆ ನಟಿ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ.
ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಾವು ಡಿವೋರ್ಸ್ ಪಡೆಯುತ್ತಿಲ್ಲ. ನಮ್ಮ ದಾಂಪತ್ಯ ಚೆನ್ನಾಗಿದೆ. ನಾವು ಖುಷಿಯಿಂದ ಬಾಳುತ್ತೀದ್ದೇವೆ ಎಂದು ಪ್ರಿಯಾಮಣಿ ಹೇಳಿದ್ದು ವದಂತಿಗಳಿಗೆ ತೆರೆ ಎಳೆದಿದ್ದಾರೆ..
ಅಂದ್ಹಾಗೆ ಉದ್ಯಮಿ ಮುಸ್ತಾಫ್ ಜೊತೆಗೆ ಪ್ರಿಯಾಮಣಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.