The Kashmir Files : ದ್ವೇಷದ ಕಸಕ್ಕೆ ಸಿನಿಮಾವನ್ನ ಹೋಲಿಕೆ ಮಾಡಿದ ನಿರ್ದೇಶಕ
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ The Kashmir Files ಸಿನಿಮಾ ದೇಶದ ಜನರನ್ನ ಒಟ್ಟುಗೂಡಿಸಿತ್ತು..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ದಶಕಗಳ ಹಿಂದೆ ಜಿಹಾದಿಗಳಿಂದ ಕ್ರೂರವಾಗಿ ಹಿಂಸಾರಾಕ್ಕೆ ಒಳಗಾಗಿದ್ದ , ಕಾಶ್ಮೀರ ಪಂಡಿತರು ಅನುಭವಿಸಿದಂತಹ ಕಷ್ಟಗಳನ್ನ , ಜಿಹಾದಿಗಳ ಕ್ರೂರತ್ವವನ್ನ , ಹೇಗೆ ಕಾಶ್ಮೀರಿ ಪಂಡಿತರು ತಮ್ಮದೇ ನೆಲವನ್ನ ಬಿಟ್ಟು ವಲಸೆ ಬಂದಿದ್ದರೆಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು..
ಈ ಸಿನಿಮಾವನ್ನ ಜನರು ಮುಗಿಬಿದ್ದು ವೀಕ್ಷಣೆ ಮಾಡಿದ್ದರು.. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿತ್ತು.. ನಂತರ ಸಿನಿಮಾ ಒಟಿಟಿಯಲ್ಲೂ ಗೆದ್ದಿತ್ತು.. ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನ ಗಳಿಸಿದೆ.. ಈ ಸಿನಿಮಾ ಸುಮಾರು 20 ರಿಂದ 30 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು..
ಅಂದ್ಹಾಗೆ ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಯಾವೊಂದು ಸಿನಿಮಾ ಕೂಡ ಮಾಡಿಲ್ಲ..
ಈ ಸಿನಿಮಾ ಬೆಂಬಲ ವ್ಯಕ್ತವಾದಂತೆಯೇ ವಿರೋಧವೂ ವ್ಯಕ್ತವಾಗಿತ್ತು.. ಅನೇಕರು ಈ ಸಿನಿಮಾವನ್ನ ವಿರೋಧ ಮಾಡಿದ್ದು ಉಂಟು..
ಇದೀಗ ಈ ಸಿನಿಮಾವನ್ನ ನಿರ್ದೇಶಕ ಡಿಲನ್ ಮೋಹನ್ ಗ್ರೇ ದ್ವೇಷದ ಕಸಕ್ಕೆ ಸಿನಿಮಾವನ್ನ ಹೋಲಿಕೆ ಮಾಡಿದ್ದಾರೆ. ಈ ಸಿನಿಮಾ ದ್ವೇಷ ಬಿತ್ತುವ ಕಸ. ಇಂತಹ ಸಿನಿಮಾಗಳಿಗೆ ಮಾನ್ಯತೆ ನೀಡಬಾರದು ಎಂದು ಕಿಡಿಕಾರಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಕಲಾತ್ಮಕ ಅರ್ಹತೆ ಇಲ್ಲದ ಸಿನಿಮಾ. ಇಂತಹ ಸಿನಿಮಾವೇನಾದರೂ ಆಸ್ಕರ್ ಹಾದಿಯಲ್ಲಿ ಕಾಣಿಸಿಕೊಂಡರೆ, ಅದು ಭಾರತಕ್ಕೆ ಆಗುವ ಅವಮಾನ ಎಂದೂ ಡಿಲನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇಂತಹ ಸಿನಿಮಾಗಳನ್ನು ಭಾರತದಂತಹ ಶಾಂತಿ ನಾಡಿನಲ್ಲಿ ಪೋಷಿಸಿದ್ದು ನನಗೆ ಅಚ್ಚರಿ ತಂದಿದೆ ಎಂದೂ ಕೂಡ ಬರೆದುಕೊಂಡಿದ್ದಾರೆ..