ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ತಮಿಳಿನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚುತ್ತಿದ್ದಾರೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ..
ಅಂದ್ಹಾಗೆ ಜೈಲರ್ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದೆ… ಈ ಬಗ್ಗೆ ಹೊಸ ಪೋಸ್ಟರ್ ಮೂಲಕ ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ..
ಜೈಲರ್ ಸಿನಿಮಾದಲ್ಲಿ ಐಶ್ವರ್ಯ ರೈ ರಜನಿಕಾಂತ್ ಗೆ ನಾಯಕಿ.. ಉಳಿದಂತೆ ಸಿನಿಮಾದಲ್ಲಿ 4 ನಾಯಕಿಯರು ಇರಲಿದ್ದಾರೆ ಎನ್ನಲಾಗ್ದೆತಿದೆ.. ಐಶ್ವರ್ಯ ರೈ ಹೊರತಾಗಿ ಪ್ರಿಯಾಂಕಾ ಮೋಹನ್ , ತಮನ್ನಾ ಇರಲಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಅಧಿಕೃತವಾಗಿ ಮಾಹಿತಿ ತಿಳಿದುಬರಬೇಕಿದೆ..
ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಸೇರಿದಂತೆ ಸ್ಯಾಂಡಲ್ವುಡ್ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ..
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ.
ಅಂದ್ಹಾಗೆ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.. ಮತ್ತೊಂದೆಡೆ ಅವರ ಅಭಿಮಾನಿ ಆಗಿರುವ ನಿರ್ದೇಶಕ ನೆಲ್ಸನ್ ಅವರ ಬೀಸ್ಟ್ ಸಿನಿಮಾವೂ ಕೂಡ ನಿರೀಕ್ಷೆ ತಲುಪಲ್ಲಿ ಡವಿತ್ತು.. ಹೀಗಾಗಿ ಈ ಸಿನಿಮಾ ಮೇಲೆ ರಜನಿ ಹಾಗೂ ನೆಲ್ಸನ್ ಅವರ ನಿರೀಕ್ಷೆ ಹೆಚ್ಚಾಗಿದೆ..
ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.