ಸದ್ಯ ಬಾಲಿವುಡ್ ನಲ್ಲಿ ಬಾಯ್ಕಾಟ್ ಟ್ರೆಂಡ್ ನಡೆಯುತ್ತಿದ್ದು ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಿವೆ.. ಸ್ಟಾರ್ ಗಳ ಸಿನಿಮಾಗಳೂ ಕೂಡ ಫ್ಲಾಪ್ ಆಗುತ್ತಿವೆ.. ಇತ್ತೀಚೆಗೆ ರಿಲೀಸ್ ಆದ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ,ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ ಕೂಡ ಫ್ಲಾಪ್ ಲಿಸ್ಟ್ ಸೇರಿವೆ..
ಲಾಲ್ ಸಿಂಗ್ ಅತಿ ಹೆಚ್ಚು ಥಿಯೇಟರ್ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು.. ಆದ್ರೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿಲ್ಲ.. ಹೀಗಾಗಿ ಆ ಚಿತ್ರಮಂದಿರಗಳ ಮಾಲೀಕರು ಆ ಸಿನಿಮಾ ತೆಗೆದು ಬೇರೆ ಸಿನಿಮಾಹಾಕಿದ್ದಾರೆ. ಅಮೀರ್ ಖಾನ್ ಅವರ ವೃತ್ತಿಜೀವನದಲ್ಲಿ ಇಂತಹ ಪರಿಸ್ಥಿತಿ ಇದೇ ಮೊದಲು.
ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಾಮೆಂಟ್ಗಳೇ ಅಮೀರ್ ಸಿನಿಮಾದ ಮೇಲಿನ ಎಲ್ಲಾ ನಕಾರಾತ್ಮಕತೆಗೆ ಕಾರಣ. ಸುಮಾರು ಒಂದು ದಶಕದ ಹಿಂದೆ, ಅಮೀರ್ ಸತ್ಯಮೇವ ಜಯತೇ ಕಾರ್ಯಕ್ರಮದ ವೇಳೆ ನೀಡಿದ ಹೇಳಿಕೆಗಳ ಪ್ರಭಾವ ಇತ್ತೀಚಿನ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಮೇಲೆ ಬಿದ್ದಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಬಹಿಷ್ಕಾರ ಸಂಸ್ಕೃತಿಗೆ ಪ್ರತಿಕ್ರಿಯಿಸಿದ್ದಾರೆ.ಕೆಲವರು ಅಮೀರ್ ಮತ್ತು ಕೆಲವರು ಟ್ರೋಲರ್ಗಳನ್ನ ಬೆಂಬಲಿಸಿದ್ದಾರೆ. ಇತ್ತೀಚೆಗಷ್ಟೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟ ಅನುಪಮ್ ಖೇರ್ ಕೂಡ ಇತ್ತೀಚೆಗೆ ಈ ಟ್ರೆಂಡ್ಗೆ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಅನುಪಮ್ ಖೇರ್ ಮಾತನಾಡಿ “ಈ ಹಿಂದೆ ಏನಾದರೂ ಹೇಳಿದರೆ ಅದು ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಯಾರಾದರೂ ಟ್ರೆಂಡ್ ಆರಂಭಿಸಲು ಬಯಸಿದರೆ.. ಮುಕ್ತವಾಗಿ ಮಾಡುತ್ತಾರೆ. ಟ್ವಿಟ್ಟರ್ ನಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಬರುತ್ತಿದೆ ಎಂದರು. ಅಮೀರ್ ಖಾನ್ ಅವರನ್ನ ಉದ್ದೇಶಿಸಿ ಅನುಪಮ್ ಹೇಳಿದ ಮಾತು ಎಲ್ಲರಿಗೂ ಅರ್ಥವಾಗಿದೆ. ಇದಕ್ಕೆ ಅಮೀರ್ ಪ್ರತಿಕ್ರಿಯಿಸುತ್ತಾರಾ ನೋಡೋಣ…
ಒಟ್ನಲ್ಲಿ ಬಾಲಿವುಡ್ ನಸೀಬ್ ಖರಾಬಾಗಿರೋದಂತೂ ನಿಜ… ಬ್ಯಾಕ್ ಟು ಬ್ಯಾಕ್ ಬರೀ ಫ್ಲಾಪ್ ಸಿನಿಮಾಗಳೇ ಬರುತ್ತಿವೆ.. ಇತ್ತ ರಕ್ಷಾಬಂಧನ ಸಿನಿಮಾ ಕೂಡ ಫ್ಲಾಪ್ ಆಗಿದೆ.. ಅದು ಕೂಡ ಅಕ್ಷಯ್ ಕುಮಾರ್ ರಂತಹ ಸ್ಟಾರ್ ಸಿನಿಮಾ.. ಆದ್ರೆ ಇವೆರೆಡೂ ಸಿನಿಮಾಗಳ ಮುಂದೆ ಸೌತ್ ಸಿನಿಮಾಗಳಾದ ಸೀತಾ ರಾಮಂ , ಕಾರ್ತಿಕೇಯ 2 ಅಬ್ಬರಿಸಿ ಬೊಬ್ಬಿರಿಯುತ್ತಿದ್ದು , ಭರ್ಜರಿ ಕಲೆಕ್ಷನ್ ಮಾಡುತ್ತಿವೆ..