ಲಾವಣ್ಯ ತ್ರಿಪಾಠಿ ಜೊತೆ ಹಸೆಮಣೆ ಏರಲಿದ್ದಾರಾ ಮೆಗಾ ಕುಟುಂಬದ ಕುಡಿ ನಟ ವರುಣ್ ತೇಜ್ (Varun Tej) ..??
ಮೆಗಾಸ್ಟಾರ್ ಕುಟುಂಬದ ಕುಡಿ , ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ , ಯುವ ನಟ ವರುಣ್ ತೇಜ್ ಶೀಘ್ರವೇ ಮುದವೆಯಾಗಲಿದ್ದಾರೆ.. ಅದಕ್ಕಾಗಿ ಸದ್ದಿಲ್ಲದೇ ತಯಾರಿಗಳೂ ಕೂಡ ಶುರುವಾಗಿದೆ ಎಂಬ ಸುದ್ದಿ ತೆಲುಗು ಸಿನಿಮಾ ನಗರ್ ನಲ್ಲಿ ಚಕ್ಕರ್ ಹೊಡೆಯುತ್ತಿದೆ..
ಹೌದು..! ನಟ ವರುಣ್ ತೇಜ್ ಹಾಗೂ ಟಾಲಿವುಡ್ ನಟಿ ಲಾವಣ್ಯ ತ್ರಿಪಾಠಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಇದೆ..
ಈ ಜೋಡಿ ಹಲವು ವರ್ಷಗಳಿಂದ ಪರಿಚಿತರಾಗಿದ್ದು ಪ್ರೀತಿಯಲ್ಲಿದ್ದರೆಂಬ ಗಾಸಿಪ್ ಹರಿದಾಡ್ತಿದೆ.. ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ,… ಆದ್ರೆ ಇಂತಹ ಗಾಸಿಪ್ ಗೆ ಈ ಹಿಂದೆ ನಟಿ ಲಾವಣ್ಯ ತ್ರಿಪಾಠಿ ಬ್ರೇಕ್ ಹಾಕಿದ್ದರು..
ಸಂದರ್ಶನವೊಂದರಲ್ಲಿ ವರುಣ್ ತೇಜ್ ಜತೆಗಿನ ಮದುವೆ ಗಾಸಿಪ್ ಬಗ್ಗೆ ಮಾತನಾಡುತ್ತಾ , ನಾನು ಒಂಟಿಯಾಗಿದ್ದೇನೆ, ನನಗೆ ಸರಿಯಾದ ಜೋಡಿ ಸಿಕ್ಕಿಲ್ಲ ಎಂದು ತಿಳಿಸಿದ್ದರು..