Sonu Sood : ಸೋನು ಸೂದ್ ಗೆ ಧನ್ಯವಾದ ತಿಳಿಸಿದ ಕನ್ನಡದ ನಟಿ ಮಾನ್ವಿತಾ
ಸೋನು ಸೂದ್… ಬಗ್ಗೆ ಗೊತ್ತಿರದವರು ಬಹುಶಃ ಭಾರತದಲ್ಲಿ ಬೆರಳೆಣಿಕೆಯಷ್ಟು ಜನ… ಲಾಕ್ ಡೌನ್ ನಿಂದ ಹಿಡಿದು ಸೋನು ಸೂದ್ ಅವರು ಇಲ್ಲಿಯವರೆಗೂ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಾ ಸಾಗ್ತಿದ್ಧಾರೆ…
ಬಾಲಿವುಡ್, ಚಂದವನ , ಸೌತ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಸೋನು ಸೂದ್ ಸದ್ಯಕ್ಕೆ ರೀಲಲ್ ನಲ್ಲಿ ಹೆಚ್ಚು ವಿಲ್ಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ.. ಆದ್ರೆ ಅವರು ರಿಯಲ್ ಲೈಫ್ ನ ಹೀರೋ ಎಂದು ಜನರೇ ಕೊಂಡಾಡ್ತಿದ್ಧಾರೆ..
ಸಾಮಾನ್ಯ ಜನರಿಗೆ ರಿಯಲ್ ಸ್ಟಾರ್ ಆಗಿದ್ದಾರೆ. ಕೊರೊನಾ ಸಮಯದಲ್ಲಿ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡ್ತಿದ್ದರು. ಆದ್ರೆ ಸೋನು ಬಳಿ ಅನೇಕರು ಅಸಮಂಜದ ಬೇಡಿಕೆಗಳನ್ನ ಇಟ್ಟಿದ್ದೂ ಉಂಟು..
ಅಂದ್ಹಾಗೆ ಈ ನಡುವೆ ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಆಗಸ್ಟ್ 24ರ ರಾತ್ರಿ ನಟ ಸೋನು ಸುದ್ದಿಗೆ ಧನ್ಯವಾದವನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಭಾರೀ ವೈರಲ್ ಆಗ್ತಿದೆ..
ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೊ ಸರ್. ಎಲ್ಲದಕ್ಕೂ ಧನ್ಯವಾದಗಳು ಬರೆದು ಸೋನು ಸೂದ್ ಗೆ ಟ್ಯಾಗ್ ಮಾಡಿದ್ದಾರೆ.
ಮಾನ್ವಿತಾ ಅವರ ತಾಯಿಯ ಚಿಕಿತ್ಸೆಗಾಗಿ ಸೋನು ಸೂದ್ ಮಾಡಿರುವ ಸಹಾಯಕ್ಕೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ… ಹೌದು, ನಟಿ ಮಾನ್ವಿತಾ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ನುರಿತ ವೈದ್ಯರ ಸಲಹೆ ನೀಡುವಂತೆ ಮಾನ್ವಿತಾ ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕ ಮಾಡಿದ್ದಾರೆ. ಅವರ ತಾಯಿಗೆ ಕಿಡ್ನಿ ವೈಫಲ್ಯತೆ ಇರುವುದನ್ನು ತಿಳಿದ ಬಳಿಕ ಅವರ ಚಿಕಿತ್ಸೆಗೆ ಸೋನು ಸೂದ್ ಫೌಂಡೇಶನ್ ಮುಂದಾಗಿದೆ.
ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಮಾನ್ವಿತಾ ತಾಯಿಗೆ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಸೋನು ಸೂದ್ ಫೌಂಡೇಶನ್ ಮಾನ್ವಿತಾ ಸಹಾಯಕ್ಕೆ ಬಂದಿರುವುದು ಬಹಳ ದೊಡ್ಡ ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ.
ಇನ್ನು ಆಸ್ಪತ್ರೆಯ ಸಿಇಓ ಜೊತೆಗೆ ಖುದ್ದಾಗಿ ಸೋನು ಸೂದ್ ಅವರೇ ಮಾತನಾಡಿ ಚಿಕಿತ್ಸೆಯ ಕುರಿತು ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ಮಾನ್ವಿತಾ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.. ಮುಂದೆ ಮಾನ್ವಿತಾ ತಾಯಿಗೆ ಕಿಡ್ನಿ ಕಸಿ ನಡೆಯಲಿದ್ದು ಅದಕ್ಕೂ ಕೂಡ ಅವರ ಫೌಂಡೇಶನ್ ಇಂದ ಸಹಾಯ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.