Sonam Kapoor : ಶಾಸ್ತ್ರೋಕ್ತವಾಗಿ ತಾಯಿ ಮಗುವನ್ನ ಮನೆಗೆ ಸ್ವಾಗತಿಸಿ ಅನಿಲ್ ಕಪೂರ್..
ಬಾಲಿವುಡ್ ನಟಿ ಸೋನಂ ಕಪೂರ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆನಂದ್ ಅಹುಜಾ ತಂದೆಯಾಗಿದ್ದಾರೆ. ದಂಪತಿಗಳು ಆಗಸ್ಟ್ 20 ರಂದು ಮಗನಿಗೆ ಜನ್ಮ ನೀಡಿದ್ದಾರೆ, ಮಗುವಿನೊಂದಿಗೆ ದಂಪತಿಗಳು ಮೊದಲ ಭಾರಿಗೆ ಅನಿಲ್ ಕಪೂರ್ ಅವರ ಮನೆ ತಲುಪಿದ್ದು. ಅಲ್ಲಿ ಪುಟ್ಟ ಅತಿಥಿಯನ್ನ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮನೆಗೆ ಸ್ವಾಗತಿಸಿದ್ದಾರೆ.
ಸೋನಂ ಮತ್ತು ಆನಂದ್ ತಮ್ಮ ಮಗನೊಂದಿಗೆ ಅನಿಲ್ ಕಪೂರ್ ಅವರ ಮನೆಗೆ ಬಂದಾಗ, ಪುರೋಹಿತರು ಶಾಸ್ರೋಕ್ತವಾಗಿ ಮಗುವನ್ನ ಮನೆ ತುಂಬಿಸಿಕೊಂಡಿದ್ದಾರೆ. ಮಗುವಿಗೆ ಪವಿತ್ರ ನೀರು ಚಿಮುಕಿಸಿ ಎಲ್ಲರ ಹಣೆಗೆ ತಿಲಕವಿಟ್ಟು ಮನೆಯೊಳಗೆ ಪ್ರವೇಶಿಸಿದರು. ಸೋನಂ ಮತ್ತು ಆನಂದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ಸೋನಂ ಕಪೂರ್ ತನ್ನ ಹೆರಿಗೆಯ ನಂತರ ಲಂಡನ್ನಿಂದ ಮುಂಬೈಗೆ ಹಿಂತಿರುಗಿದ್ದಾರೆ ಸ್ವಲ್ಪ ಸಮಯದವರೆಗೆ ಅವರು ತವರು ಮನೆಯಲ್ಲೇ ಇರಲಿದ್ದಾರೆ.
Anand Ahuja And Sonam Kapoor With Their Newborn Baby Reached At Anil Kapoor Residence