Sudeep : ಅಭಿನಯ ಚಕ್ರವರ್ತಿ ಸುದೀಪ್ ಕಾಮನ್ ಡಿಪಿ ರಿಲೀಸ್ ಮಾಡಿದ ಹ್ಯಾಟ್ರಿಕ್ ಹೀರೋ..!!
ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಕಿಚ್ಚ ಸುದೀಪ್ ಅವರು ಸ್ಥಾನ ಪಡೆದಿದ್ದಾರೆ… ಪರ ಭಾಷೆಗಳಲ್ಲೂ ಪಾರುಪಥ್ಯ ಮೆರೆದಿದ್ದಾರೆ.. ಪರಭಾಷಾಭಿಮಾನಿಗಳಲ್ಲೂ ಕಿಚ್ಚನ ಕ್ರೇಜ್ ಇದೆ.. ಸುದೀಪ್ ಅವರು ಬ್ಯುಸಿನೆಸ್ , ಕ್ರಿಕೆಟ್ , ನಿರೂಪಣೆ ನಟನೆ ಎಲ್ಲಾ ವಿಭಾಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಕೊನೆಯದಾಗಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.. ಈ ಸಿನಿಮಾ ಸೆಪ್ಟೆಂಬರ್ 2 ಕ್ಕೆ ಒಟಿಟಿ ಫ್ಲಾಟ್ ಫಾರ್ಮ್ Zee5 ನಲ್ಲಿ ರಿಲೀಸ್ ಆಗ್ತಿದೆ.. ಅಂದು ವಿಶೇಷ ಏನಂದ್ರೆ ಬಾದ್ ಷಾ ಕಿಚ್ಚ ಸುದೀಪ್ ಅವರ ಬರ್ತ್ ಡೇ…
ಹೀಗಾಗಿ ಬರ್ತ್ ಡೇ ಗೆ ಇನ್ನೂ 3 -4 ದಿನಗಳು ಬಾಕಿಯಿರೋವಾಗ್ಲೇ ಕಿಚ್ಚನ ಕಾಮನ್ ಡಿಪಿ ಬಿಡುಗಡೆಯಾಗಿದೆ.. ಇನ್ನೂ ವಿಷೇಶ ಅಂದ್ರೆ ಸುದೀಪ್ ಕಾಮನ್ ಡಿಪಿ ರಿಲೀಸ್ ಮಾಡಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್…
ವಿಕ್ರಾಂತ್ ರೋಣ ಸಿನಿಮಾದ ಸೂಪರ್ ಸಕ್ಸಸ್ ನಂತರ ಕಿಚ್ಚ ಸುದೀಪ್ ಬರ್ತ್ ಡೇ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ.
ಈ ನಡುವೆ ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸರ್ಪ್ರೈಸ್ ನೀಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಸುದೀಪ್ ಬರ್ತ್ ಡೇ ಗೆ ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ.
ಸೆಪ್ಟೆಂಬರ್ 2 ಕಿಚ್ಚನ ಹುಟ್ಟುಹಬ್ಬವಾಗಿದ್ದು, ಇದನ್ನ ಸುದೀಪಿಯನ್ಸ್ ಹಬ್ಬದಂತೆ ಆಚರಿಸುತ್ತಾರೆ.
ಅವರು 49ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸುದೀಪ್ ಹೊಸ ಸಿನಿಮಾದ ಅಪ್ ಡೇಟ್ ನೀಡುವ ಸಾಧ್ಯತೆಗಳಿವೆ.
ಅಂದಹಾಗೆ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಹಿಟ್ ಆಗಿದೆ.
ಈ ಸಕ್ಸಸ್ ಜೊತೆಗೆ ಕಿಚ್ಚನ ಹುಟ್ಟುಹಬ್ಬ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ.
ಇನ್ನು ಕಿಚ್ಚನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.