ಆಲಿಯಾ ಭಟ್, ರಣಬೀರ್ ಕಪೂರ್, ಮೌನಿ ರಾಯ್, ನಾಗಾರ್ಜುನ, ಅಯಾನ್ ಮುಖರ್ಜಿ ಮತ್ತು ಕರಣ್ ಜೋಹರ್ ಸೇರಿದಂತೆ ಇಡೀ ಬ್ರಹ್ಮಾಸ್ತ್ರ ತಂಡವು ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.. ಸಾಲು ಸಾಲು ಸೋಲುಗಳನ್ನೆ ಕಾಣುತ್ತಿರುವ ಬಾಲಿವುಡ್ ಪಾಲಿಗೆ ಬ್ರಹ್ಮಾಸ್ತ್ರ ಆಶಾಕಿರಣದಂತೆ ಕಾಣ್ತಿದೆ.. ಕಾರ್ಯಕ್ರಮದಲ್ಲಿ ಬಾಹುಬಲಿ ಖ್ಯಾತಿಯ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸಹ ಭಾಗಿಯಾಗಿದ್ದರು..
ಅಂದ್ಹಾಗೆ ಇಡೀ ಈವೆಂಟ್ ನಲ್ಲಿ ಹೈಲೇಟ್ ಆಗಿದ್ದು ಆಲಿಯಾ.. ಅವರು ಧರಿಸಿದ್ದ ವಿಶೇಷ ುಡುಪು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆಲಿಯಾ ಅವರು ಪಿಂಕ್ ಶಾರಾರಾ ಡ್ರೆಸ್ ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.. ಆದ್ರೆ ಗಮನ ಸೆಳೆದದ್ದು ಅಂದ್ರೆ ಅವರ ಬಟ್ಟೆಯ ಹಿಂಬದಿಯ ಅಕ್ಷರಗಳು..
‘ಬೇಬಿ ಆನ್ ಬೋರ್ಡ್’ ಎಂದು ಹಿಂಬದಿ ಬರೆಯಲಾಗಿದ್ದು , ಈಗ ಇದು ಸಖತ್ ವೈರಲ್ ಆಗ್ತಿದೆ.. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರಂತೂ ಹೀನಾಮಾನವಾಗಿ ಟ್ರೋಲ್ ಮಾಡ್ತಿದ್ದಾರೆ.. ಸಿನಿಮಾ ಪ್ರಕಾರಕ್ಕಾಗಿ ಇನ್ನೂ ಜನಿಸದ ಕಂದಮ್ಮನ ಬಳಸುತ್ತಿದ್ದೀರಾ ಎಂದು ಟ್ರೋಲ್ ಮಾಡ್ತಿದ್ದಾರೆ..
ಬ್ರಹ್ಮಾಸ್ತ್ರ ಪ್ರೀ-ರಿಲೀಸ್ ಈವೆಂಟ್ನಲ್ಲಿ, ಆಲಿಯಾ ಗುಲಾಬಿ ಬಣ್ಣದ ಶರರಾವನ್ನು ಧರಿಸಿದ್ದರು. ಆಕೆಯ ಬೆನ್ನಿನ ಮೇಲೆ “ಮಗುವಿನ ಮೇಲೆ ಮಗು” ಎಂದು ಬರೆಯಲಾಗಿತ್ತು.
View this post on Instagram