Liger …. ಸೆನ್ಷೇಷನಲ್ ಸ್ಟಾರ್… ಟಾಲಿವುಡ್ ನ ರೌಡಿ ಹೀರೋ… ವಿಜಯ್ ದೇವರಕೊಂಡ ನಟನೆ …. ಸೆನ್ಷೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ…
ಬೆಟ್ಟದಷ್ಟು ನಿರೀಕ್ಷೆ ಹೊತ್ತು ಬಂದು ಥಿಯೇಟರ್ ಗಳಲ್ಲಿ ಟುಸ್ ಆಗಿದೆ.. ನಿರೀಕ್ಷೆ ಮುಟ್ಟದೇ ಫೇಲ್ ಆಗಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡದೇ ಇದ್ರು ಪರವಾಗಿಲ್ಲ ಎಂಬಂತೆ ಮೊದಲ ದಿನದ ಕಲೆಕ್ಷನ್ ಇತ್ತಾದ್ರೂ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ..
ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂವ್ ಗಳೇ ಹೆಚ್ಚಾಗಿದೆ.. ಅಂದ್ಹಾಗೆ ಸಿನಿಮಾಗೆ ಅತ್ಯಂತ ಕಳಪೆ IMDB ರೇಟಿಂಗ್ ಸಿಕ್ಕಿದ್ದು , ಇದು ಹುಚ್ಚ ವೆಂಕಟ್ ಸಿನಿಮಾಗಿಂತಲೂ ಕಡಿಮೆಯಿದೆ..
ಈ ವರ್ಷದ ಅಟ್ಟರ್ ಫಾಫ್ ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ ಚಿತ್ರಗಳಿಂತ ಕಡಿಮೆ ರೆಟಿಂಗ್ ಈ ಸಿನಿಮಾಗೆ ಸಿಕ್ಕಿದೆ…
ಅಂದ್ಹಾಗೆ ಸಿನಿಮಾದಿಂದ ವಿತರಕರಿಗೆ ಭಾರೀ ನಷ್ಟವಾಗಿದೆ..
ನಿರ್ಮಾಪಕ, ಡಿಸ್ಟ್ರಿಬ್ಯೂಟರ್ಸ್ ಗೆ ಭಾರಿ ನಷ್ಟ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಪೂರಿ ಜಗನ್ನಾಥ್, ವಿಜಯ್ ದೇವರಕೊಂಡ ಮೇಲೆ ಕೆಲವರು ವಿಮರ್ಶೆಗಳನ್ನು ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾದಿಂದ ಕೆಲ ಸಮಯ ಬ್ರೇಕ್ ಪಡೆಯುತ್ತಿರೋದಾಗಿ ಪೋಸ್ಟ್ ಹಾಕಿದ್ದರು..
ಪುರಿ ಜಗನ್ನಾಥ್ ಈಗ ಸ್ವಲ್ಪ ಸಮಯದವರೆಗೆ ಮುಂಬೈ ಬಿಟ್ಟು ಹೈದರಾಬಾದ್ಗೆ ಮರಳಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಮನೆಯ ಬಾಡಿಗೆ ತಿಂಗಳಿಗೆ 10 ಲಕ್ಷ ರೂಪಾಯಿ ಮತ್ತು ಹೆಚ್ಚುವರಿ ನಿರ್ವಹಣಾ ವೆಚ್ಚ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಪುರಿ ಸ್ಥಳವನ್ನು ಖಾಲಿ ಮಾಡಿ ಹೈದರಾಬಾದ್ನಲ್ಲಿರುವ ತಮ್ಮ ಮನೆಗೆ ತೆರಳಲು ಯೋಚಿಸುತ್ತಿದ್ದಾರೆ. ಪ್ರಸಿದ್ಧ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಅವರ ಮನೆ ಇದೆ..
ಅಂದ್ಹಾಗೆ ಸಿನಿಮಾ ಸೋತ ನಂತರ ವಿತರಕರು ನಷ್ಟ ಭರಿಸುವಂತೆ ಒತ್ತಾಯ ಹೇರುತ್ತಿರುವ ಬೆನ್ನಲ್ಲೇ ನಿರ್ದೇಶಕ ನಿರ್ಮಾಪಕ ಪುರಿ ಜಗನ್ನಾಥ್ ಅವರು ಮುಂಬೈ ಫ್ಲಾಟ್ ನಿಂದ ಹೈದ್ರಾಬಾದ್ ಗೆ ಶಿಫ್ಟ್ ಆಗ್ತಿದ್ದಾರೆ ಎಂಬ ವದಂತಿಗಳು ಹರಿದಾಡ್ತಿದೆ..