Brahmastra : 2 ನೇ ಭಾಗದಲ್ಲಿ ಶಾರುಖ್ ಪ್ರಮುಖ ಪಾತ್ರ..?? ರಣಬೀರ್ ಕಥೆಯೇನು..??
ಸಾಕಷ್ಟು ನಿರೀಕ್ಷೆಯೊಂದಿಗೆ ರಿಲೀಸ್ ಆಗಿರುವ ರಣಬೀರ್ ಕಪೂರ್ ಆಲಿಯಾ ಭಟ್ ಬ್ರಹ್ಮಾಸ್ತ್ರ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಆದ್ರೆ ಆರಂಭಿಕ ವಾರದಲ್ಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕ,ಮಾಲ್ ಮಾಡಿದೆ ದ್ರೂ ಲೆಕ್ಕಾಚಾರಗಳು , ಕಲೆಕ್ಷನ್ ವರದಿ ವಿಮರ್ಶೆ ಎಲ್ಲವೂ ನಕಲಿ ಎಂಬ ಅನುಮಾನಗಳನ್ನ ಸಿನಿಮಾ ಪಂಡಿತರು , ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ..
ಕೆಲವರು ಸಿನಿಮಾವನ್ನ ಅಧ್ಬುತ ಎಂದ್ರೆ ಕೆಲಜವರು ಡಿಸಾಸ್ಟರ್ ಅಂತಿದ್ದಾರೆ.. ಕೆಲವರು 410 ಕೋಟಿ ಬಜೆಟ್ ನ ಈ ಸಿನಿಮಾ ಮಕ್ಕಳಿಗೆ ಸೀಮಿತ ಎನ್ನುತ್ತಿದ್ದಾರೆ.,.. ಕೆಲವರು ಆಲಿಯಾ ರಣಬೀರ್ ಕೆಮಿಸ್ಟ್ರಿಗೆ ಹೊಗಳಿಕೆ ಮಾತುಗಳನ್ನೂ ಆಡ್ತಿದ್ದಾರೆ..
ಪ್ಯಾನ್ ಇಂಡಿಯನ್ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ 43 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಅಯಾನ್ ಮುಖರ್ಜಿ ನಿರ್ದೇಶನ , ರಣಬೀರ್ ಕಪೂರ್ , ಆಲಿಯಾ ಭಟ್ , ಅಮಿತಾಬ್ , ನಾಗಾರ್ಜುನ್ , ಮೌನಿ ರಾಯ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿದೆ..
ಅದ್ರಲ್ಲೂ ಸಿನಿಮಾದಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟಿರೋದೇ ಸಿನಿಮಾದ ಹೈಲೇಟ್ ಆಗಿದ್ದು , ಮೇನ್ ರೋಲ್ಸ್ ಗಿಂತಲೂ ಶಾರುಖ್ ಖಾನ್ ಪಾತ್ರದ್ದೇ ಸೌಂಡ್ ಜಾಸ್ತಿಯಾಗಿದೆ..
ಇದೇ ಕಾರಣಕ್ಕೆ ಅಯಾನ್ ಅಸ್ತ್ರವರ್ಸ್ ನಲ್ಲಿ ಶಾರುಖ್ ಪಾತ್ರಕ್ಕೆ ಮಹತ್ವ ನೀಡಬೇಕೆಂಬ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಅಭಿಯಾನಕ್ಕೆ ಮಣಿದ ನಿರ್ದೇಶಕರು ಮುಂದಿನ ಭಾಗದಲ್ಲಿ ಶಾರುಖ್ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಿದ್ದಾರೆ ಎನ್ನಲಾಗ್ತಿದೆ..
ಶಾರುಖ್ ಖಾನ್ ಪಾತ್ರ ಕೇವಲ ಅತಿಥಿ ಪಾತ್ರಕ್ಕೆ ಸೀಮಿತವಾಗಬಾರದು. ನಾವು ಅವರ ಪಾತ್ರದ ಪೂರ್ತಿ ಕತೆ ಹೇಳಬೇಕು. ವಿಜ್ಞಾನಿಯ ಪೂರ್ಣ ವ್ಯಕ್ತಿತ್ವವನ್ನು, ಆತ ವಿಜ್ಞಾನಿಯಾಗಿದ್ದಕ್ಕೆ ಕಾರಣವನ್ನು ತಿಳಿಸಬೇಕು. ಆ ಪಾತ್ರದ ವಿವಿಧ ಶೇಡ್ಗಳ ಪರಿಚಯ ಮಾಡಿಸಬೇಕು. ನಾನು ಹಾಗೂ ನನ್ನ ನಿರ್ದೇಶಕರ ತಂಡ ಈ ಬಗ್ಗೆ ಸತತವಾಗಿ ಚರ್ಚೆ ಮಾಡುತ್ತಿದ್ದೇವೆ.
‘ಬ್ರಹ್ಮಾಸ್ತ್ರ’ ಸಿನಿಮಾದ ವಿವಿಧ ಕವಲುಗಳ ಬಗ್ಗೆ ಚಿಂತಿಸುತ್ತಲೇ ಇದ್ದೇವೆ. ಹಲವರ ಸಲಹೆಗಳನ್ನು ಸ್ವೀಕರಿಸುತ್ತಿದ್ದೇವೆ. ಹೊಸ ಯೋಜನೆಗಳನ್ನು ಮಾಡುತ್ತಿದ್ದೇವೆ. ಹೊಸ ಹೊಸ ಕತೆಗಳೊಟ್ಟಿಗೆ ನಾವು ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದಿದ್ದಾರೆ ಅಯಾನ್ ಮುಖರ್ಜಿ.
ಬಾಯ್ಕಾಟ್ ಬಿಸಿ ತಟ್ಟಿದ್ದರೂ ಸಿನಿಮಾಗೆ ಬಾಯ್ಕಾಟ್ ನ ಒಂದಿಷ್ಟು ಎಫೆಕ್ಟ್ ಆಗಿಲ್.. ರಕ್ಷಾ ಬಂಧನ , ಲಾಲ್ ಸಿಂಗ್ ಚಡ್ಡಾ ಸಿನಿಮಾಗಳಿಗೂ ಬಾಯ್ಕಾಟ್ ಎಫೆಕ್ಟ್ ತಟ್ಟಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು.. ಆದ್ರೆ ಬಾಯ್ಕಾಟ್ ಗೂ ಕ್ಯಾರೇ ಮಾಡದೇ ಸಿನಿಮಾ ಮುನ್ನುಗ್ಗುತ್ತಿದೆ..
ಪ್ಯಾನ್ ಇಂಡಿಯನ್ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ 43 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಅಯಾನ್ ಮುಖರ್ಜಿ ನಿರ್ದೇಶನ , ರಣಬೀರ್ ಕಪೂರ್ , ಆಲಿಯಾ ಭಟ್ , ಅಮಿತಾಬ್ , ನಾಗಾರ್ಜುನ್ , ಮೌನಿ ರಾಯ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾದಲ್ಲಿದೆ..