Oscars ಗೆ ರಾಜಮೌಳಿ – ರಾಮ್ ಚರಣ್ – ಎನ್ ಟಿಆರ್ – RRR ನಾಮಿನೇಟ್..!!!
SS ರಾಜಮೌಳಿ ನಿರ್ದೇಶನದಲ್ಲಿ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಎನ್ಟಿಆರ್ ಅಭಿನಯದ ಈ ಚಿತ್ರವು ಈ ವರ್ಷ ಮಾರ್ಚ್ 25 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆದಿತ್ತು.
ರಾಜಮೌಳಿಯ ಮೇಕಿಂಗ್, ರಾಮ್ ಚರಣ್ ಮತ್ತು ತಾರಕ್ ಆಕ್ಟಿಂಗ್ ಸಿನಿಮಾವನ್ನ ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಬಿಡುಗಡೆಯ ನಂತರ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೂ ಮೀರಿದ ಗಳಿಕೆ, ಯಶಸ್ಸು ಪಡೆದಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ RRR ಚಿತ್ರ ಮತ್ತೆ ಟ್ರೆಂಡಿಂಗ್ ನಲ್ಲಿದೆ.
ಹೌದು..! RRR ಸಿನಿಮಾ ಎರೆಡು ವಿಭಾಗಗಳಲ್ಲಿ ಆಸ್ಕರ್ ಅವಾರ್ಡ್ ಗೆ ನಾಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ.. ಒಂದೊಮ್ಮೆ ಈ ಸಿನಿಮಾ ಪ್ರಶಸ್ತಿ ಗೆದ್ದರೆ ಭಾರತದ ಸಿನಿಮಾವೊಂದು ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದ ಹಿರಿಮೆಗೆ ಪಾತ್ರವಾಗಲಿದೆ.. 21 ವರ್ಷಗಳ ಹಿಂದೆ ಆಮಿರ್ ಖಾನ್ ನಟನೆಯ ಲಗಾನ್ ಸಿನಿಮಾ ಆಸ್ಕರ್ ಗೆ ನಾಮ ನಿರ್ದೇಶನಗೊಂಡಿತ್ತು. ಇದಾದ ಬಳಿಕ ಭಾರತದ ಯಾವ ಸಿನಿಮಾಗಳೂ ಆಸ್ಕರ್ ಗೆ ನಾಮಿನೇಟ್ ಆಗಿಲ್ಲ.
ಈ ಬಾರಿ RRR ಸಿನಿಮಾ Oscars ನ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಳ್ಳುವ ಸಾಧ್ಯತೆಯಿದೆ.. ಈಗಾಗಲೇ ನಿರ್ದೇಶಕ ರಾಜಮೌಳಿ ಅವರ ಪ್ರತಿಭೆಯನ್ನು ಹಾಲಿವುಡ್ ನ ತಾರೆಯರು ಹೊಗಳಿದ್ದಾರೆ. RRR ಸಿನಿಮಾ ಆಸ್ಕರ್ ಪಡೆದು ಭಾರತದಲ್ಲಿ ಇತಿಹಾಸ ಸೃಷ್ಟಿಸಲಿ ಎನ್ನುವುದು ಅಭಿಮಾನಿಗಳ ಸೆಯಾಗಿದೆ..