‘Brahmastra’ ಎದುರು ಸೋಲೊಪ್ಪಿಕೊಂಡ ‘The Kashmir Files’ ನಿರ್ದೇಶಕರು
ಸಾಲು ಸಾಲು ಸೋಲುಂಡು ಕಂಗೆಟ್ಟಿದ್ದ ಬಾಲಿವುಡ್ ಪಾಲಿಗೆ ಬ್ರಹ್ಮಾಸ್ತ್ರ ವರದಾನವಾಗಿದೆ..
ಸೆಪ್ಟೆಂಬರ್ 9 ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 2 ನೇ ವಾರವೂ ಮೋಡಿ ಮಾಡ್ತಿದೆ.. ಸಿನಿಮಾ ಈವರೆಗೂ 250 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ ಎಂದು ಸಿನಿಮಾ ತಂಡ ಹೇಳಿಕೊಳ್ತಿದೆ..
ಆದ್ರೆ ಸಿನಿಮಾ ಪಂಡಿತರು , ಕೆಲ ತಾರೆಯರು , ನೆಟ್ಟಿಗರು ಇದು ಸುಳ್ಳು ವರದಿ.. ನಕಲಿ ರಿಪೋರ್ಟ್.. ಸಿನಿಮಾ ಚನಾಗಿಲ್ಲ.. ಎಂದೆಲ್ಲಾ ಹೇಳ್ತಿದ್ದು , ಸಿನಿಮಾದ ನೈಜ ಕಲೆಕ್ಷನ್ ಸಾಕಷ್ಟು ಗೊಂದಲಗಳಿವೆ..
ಇದೆಲ್ಲದರ ನಡುವೆ.. ಬಾಲಿವುಡ್ ನಲ್ಲಿ ಇತ್ತೀಚೆಗೆ ಸದ್ದು ಮಾಡಿದ ಒಂದೇ ಒಂದು ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ರೆಕಾರ್ಡ್ ಬೀಟ್ ಮಾಡಿದೆ.. ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಕಾಶ್ಮೀರ್ ಫೈಲ್ಸ್ ಎದು ಗೆದ್ದಿದೇ ಎನ್ನುತ್ತಾ , ವಿವೇಕ್ ಅಗ್ನಿಹೋತ್ರಿ ಅವರನ್ನ ಕೆಲವರು ಟೀಕಿಸುತ್ತಿರುವುದೂ ಉಂಟು..
ಇದೀಗ ಬಗ್ಗೆ ಪ್ರತಿಕ್ರಿಯಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನನಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ..