ಸಿನಿಮಾ : ನ್ಯಾನೋ ನಾರಾಯಣಪ್ಪ
ನಿರ್ಮಾಪಕರು : ಕುಮಾರ್
ನಿರ್ದೇಶಕರು : ಕುಮಾರ್
ಬ್ಯಾನರ್ : ಕೇಸರಿ ಫಿಲಮ್ಸ್ ಕ್ಯಾಪ್ಚರ್
ನಟರು : ಕೃಷ್ಣಾಜಿ ರಾವ್ ( KGF ತಾತ ) , ಕಾಕ್ರೋಚ್ ಸುಧಿ , ಪ್ರಶಾಂತ್ ಸಿದ್ಧಿ , ಅಕ್ಷತಾ ಕುಕ್ಕಿ
ಸಂಗೀತ : ಆಕಾಶ್ ಪರ್ವ
KGF ಸಿನಿಮಾದಲ್ಲಿ ತಾತನ ಪಾತ್ರದ ಮಿಂಚಿ ಸಖತ್ ಫೇಮಸ್ ಆಗಿದ್ದ ಕೃಷ್ಣಾಜಿ ರಾವ್ ಅವರು ನಾಯಕನಾಗಿ ನಟಿಸಿರುವ ಸಿನಿಮಾ ನ್ಯಾನೋ ನಾರಾಯಣಪ್ಪ… ಇದೀಗ ಈ ಸಿನಿಮಾ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.. ಸಿನಿಮಾದ ಟ್ರೇಲರ್ ನೋಡಿ ಯೂಟ್ಯೂಬ್ ನಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..
2.49 ಸೆಕೆಂಡ್ ನ ಟೀಸರ್ ಆರಂಭದಲ್ಲಿ KGF ನ ತಾತ ಈಗೆಷ್ಟು ಫೇಮಸ್ ಆಗಿದ್ದಾರೆ ಗೊತ್ತಾ ಎಂದು ಅವರ ಜನಪ್ರಿಯತೆಯನ್ನ ತೋರಿಸುವ ಮೂಲಕ ರಂಭಗೊಳ್ಳುತ್ತದೆ.. ಹೆಲೋ ಫ್ರೆಂಡ್ಸ್ ನಾನು ನಾರಾಯಣ ಅಲಿಯಾಸ್ ನ್ಯಾನೋ ನಾರಾಯಣ ಅನ್ನೋ ಅಂತ ಡೈಲಾಗ್ ಹೊಡೆದುಕೊಂಡು ಬರುತ್ತಾರೆ KGF ತಾತ..
ಸಿನಿಮಾದ ಟ್ರೇಲರ್ ಒಂದು ರೀತಿ ಮನಸ್ಸಿಗೆ ಹಿತ ನೀಡುವಂತಿದೆ.. ವೃದ್ಧ ದಂತಿ , ಅವರ ನ್ಯಾನೋ ಕಾರ್ ನಲ್ಲಿ ಓಡಾಟ.. ಅವರಿಬ್ಬರ ನಡುವಿನ ಒಡನಾಟ ಜೊತೆಗೊಂದಿಷ್ಟು ಕಾಮಿಡಿ ಸೀನ್ಸ್ ಟ್ರೇಲರ್ ತುಂಬಾ ಇಷ್ಟವಾಗುತ್ತದೆ..
ವಿಷೇಶ ಅಂದ್ರೆ ಈ ಸಿನಿಮಾ ಸತ್ಯ ಕಥೆಯಾಧಾರಿತ.. ವಯಸ್ಸಾದ ದಂಪತಿ… ಅವರ ನಡುವಿನ ಪ್ರೀತಿ ಎಲ್ಲವೂ ಸರಿಯಿದ್ದಾಗಲೇ ಪತ್ನಿಗೆ ಕಾಯಿಲೆ ಆಪರೇಷನ್ ಮಾಡಲೇ ಬೇಕು.. ದುಡ್ಡು ಬಹಳ ಖರ್ಚಾಗುತ್ತೆ… ಹೇಗೆ ಹೊಂದಿಸುವುದು ಎನ್ನುವ ಚಿಂತೆಯಲ್ಲಿ ನ್ಯಾನೋ ನಾರಾಯಣಪ್ಪ ಕುಗ್ಗುವುದು.. ಆಮೇಲೆ ಬೇಡದ ದಾರಿ ಹಿಡಿಯುವುದು.. ಆ ನಂತರ ಏನೆಲ್ಲಾ ನಡೆಯಲಿದೆ ಅನ್ನೋ ಕಥೆಯೇ ಸಿನಿಮಾ,…
ಇದು ಕಂಟೆಂಟ್ ಬೇಸ್ಡ್ ಸಿನಿಮಾ ಇದಾಗಿದ್ದು , ಸಿನಿಮಾದ ಟ್ರೇಲರ್ ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸುತ್ತಿದ್ದಾರೆ ನೆಟ್ಟಿಗೆರು..