ಆಸ್ಕರ್ ಗೆ ಭಾರತದಿಂದ RRR ಅಥವ ದಿ ಕಾಶ್ಮೀರ್ ಫೈಲ್ಸ್ ಪ್ರವೇಶ ಪಡೆಯಲಿದೆ ಎನ್ನಲಾಗ್ತಿತ್ತು.. ಇದೆರೆಡು ಸಿನಿಮಾಗಳ ಫ್ಯಾನ್ಸ್ ಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪೈಪೋಟಿಯೂ ತೀವ್ರವಾಗಿತ್ತು.. ಆದ್ರೆ ಸೈಲೆಂಟ್ ಆಗಿ ಯಾರೂ ಗೆಸ್ ಮಾಡದ ರೀತಿಯಲ್ಲಿ ‘ಚಲ್ಲೊ ಶೋ’ ಸಿನಿಮಾ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆಯಾಗಿದೆ..
ಆದ್ರೆ ಇದೇ ವಿಚಾರವಾಗಿ ನಟ ಆರ್ ಮಾಧವನ್ ಅವರು ಅಸಮಾಧಾನಗೊಂಡಿದ್ದಾರೆ.. ತಮ್ಮ ರಾಕೆಟ್ರಿ ಸಿನಿಮಾವನ್ನ ಆಯ್ಕೆ ಮಾಡದಕ್ಕೆ ಬೇಸರಗೊಂಡಿದ್ದು , ತಮ್ಮ ಅಸಮಾಧಾನವನ್ನ ಕೂಲಾಗಿಯೇ ತೋರಿಸಿಕೊಂಡಿದ್ದಾರೆ..
ಹೌದು..! ಸಂದರ್ಶನವೊಂದ್ರಲ್ಲಿ ಈ ಬಗ್ಗೆ ಮಾತನಾಡ್ತಾ
ಭಾರತವು ‘ರಾಕೆಟ್ರಿ’, ‘ದಿ ಕಾಶ್ಮೀರ್ ಫೈಲ್ಸ್’ ಅಂಥಹ ಸಿನಿಮಾಗಳನ್ನು ಆಸ್ಕರ್ಸ್ಗೆ ಕಳಿಸಬೇಕು ಎಂದಿದ್ದಾರೆ. ”ಈಗ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆ ಆಗಿರುವ ‘ಚೆಲ್ಲೊ ಶೋ’ಗೆ ಅಭಿನಂದನೆ, ಆ ಸಿನಿಮಾವು ಪ್ರಶಸ್ತಿ ಗೆಲ್ಲಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ. ಆದರೆ ಆಸ್ಕರ್ಗೆ ಪರ್ಯಾಯವಾದ ಪ್ರಶಸ್ತಿಯೊಂದನ್ನು ಭಾರತದಲ್ಲಿಯೇ ಹುಟ್ಟುಹಾಕಬೇಕು ಎಂದೂ ಕೂಡ ಮಾಧವನ್ ಸಲಹೆ ನೀಡಿದ್ದಾರೆ.. ಇನ್ನೂ ಹಲವು ತಾರೆಯರ ಅಭಿಪ್ರಾಯವೂ ಇದೇ ಆಗಿದೆ..