RRR ಹಾಗೂ ದಿ ಕಾಶ್ಮೀರ್ ಫೈಲ್ಸ್ ಆಸ್ಕರ್ಸ್ ಗೆ ಆಯ್ಕೆಯಾಗುವ ನಿರೀಕ್ಷೆ ಬಹಳವೇ ಇತ್ತಾದ್ರೆ ಗುಜರಾತಿ ಸಿನಿಮಾ ಛೆಲ್ಲೋ ಶೋ ಆಸ್ಕರ್ಸ್ ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದು ಬಹುತೇಕರಿಗೆ ನಿರಾಸೆಯಾಗಿದೆ.. ಅಲ್ದೇ ಛೆಲ್ಲೋ ಶೋ ಆಯ್ಕೆ ಮಾಡಿದಕ್ಕೆ ಆಕ್ಷೇಪ ವ್ಯಕ್ತವಾಗ್ತಿದೆ..
ಅಲ್ಲದೇ ಈ ಸಿನಿಮಾ ಭಾರತದ್ದೇ ಅಲ್ಲ, ಹೇಗೆ ಭಾರತದಿಂದ ಈ ಸಿನಿಮಾ ಸ್ಪರ್ಧೆ ಮಾಡುತ್ತದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಸಿನಿಮಾ ಎಂಪ್ಲಾಯ್ಸ್ ಸಂಘವು ಆಕ್ಷೇಪಿಸಿದೆ. ಈ ಆಯ್ಕೆಯನ್ನು ಕೂಡಲೇ ತಡೆಹಿಡಿದು, ಬೇರೆ ಸಿನಿಮಾವನ್ನು ಆಯ್ಕೆ ಮಾಡುವಂತೆ ಸಂಘದ ಅಧ್ಯಕ್ಷ ಬಿ.ಎನ್. ತಿವಾರಿ ಹೇಳಿದ್ದಾರೆ. ಈ ಕುರಿತು ಅವರು ಸಂಬಂಧಪಟ್ಟ ಮಂತ್ರಿಗಳಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ.