Pushpa 2 ಮುಹೂರ್ತ ಮುಗಿದು ತಿಂಗಳಾದ್ರೂ ಶುರುವಾಗದ ಶೂಟಿಂಗ್…!!! ಕಾರಣ ಇದೇನಾ..??
ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ.. ಸದ್ಯಕ್ಕೆ ಟಾಲಿವುಡ್ ಸಿನಿಮಾಗಳ ಶೂಟಿಂಗ್ ಅನ್ನ ಆಗಸ್ಟ್ 1 ರಿಂದ ಬಂದ್ ಮಾಡಲಾಗಿದೆ..
ಇದೀಗ ‘ಪುಷ್ಪ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ KGF 2 ಹವಾ…!!! ಎಲ್ರಿಗೂ ಗೊತ್ತಿದೆ..ಬಾಕ್ಸ್ ಆಫೀಸ್ ನಲ್ಲಿ ಯಾವ್ ರೇಂಜ್ ಗೆ ತೂಫಾನ್ ಎಬ್ಬಿಸಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ..
ಇದೀಗ KGF 2 ರೇಂಜ್ ಗೆ ಸದ್ದು ಮಾಡಬೇಕು , ಅದರ ರೆಕಾರ್ಡ್ ಮುರಿಯಲು ಪುಷ್ಪ 2 ಅದ್ಧೂರಿಯಾಗಿ ತಯಾರಾಗಬೇಕಿದೆ..
ಪುಷ್ಪಾ 2 ಸಿನಿಮಾ ಬಗ್ಗೆ ಸಾಕಷ್ಟು ಕ್ರೇಜ್ ಇದೆ.
ಅದಕ್ಕಾಗಿಯೇ ಲೇಟ್ ಆಗಿ ಬಂದ್ರೂ ಲೆಟೆಸ್ಟ್ ಆಗಿ ಬರಬೇಕು ಅಂತಾ ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ಮೂಲಗಳ ಪ್ರಕಾರ ಸೀಕ್ವೆಲ್ ನ ಮೊದಲ ನಿರ್ಧಾರಿಕ ಕಥೆಯಲ್ಲೂ ಸುಕುಮಾರ್ ಅವರು ಬದಲಾವಣೆ ತಂದಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಸೀಕ್ವೆಲ್ ಗೆ ಮುಹೂರ್ತ ನೆರವೇರಿ ತಿಂಗಳಾದ್ರೂ ಶೂಟಿಂಗ್ ಮಾತ್ರ ಶುರುವಾಗಿಲ್ಲ..
ಅಂದ್ಹಾಗೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಲಿದೆ.
ಅಕ್ಟೋಬರ್ ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ ಎನ್ನಲಾಗ್ತಾಯಿದೆ… ರಕ್ತಚಂದನದ ಸ್ಮಗ್ಲಿಂಗ್ ಕಥೆಯಾಧಾರಿತ ಸಿನಿಮಾವಿದಾಗಿದ್ದು ರಶ್ಮಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ..
ಅಂದ್ಹಾಗೆ ಸಿನಿಮಾದ ಶೂಟಿಂಗ್ ಈವರೆಗೂ ಪ್ರಾರಂಭವಾಗದೇ ಇರೋದಕ್ಕೆ ಅಲ್ಲು ಅವರ ಪರಿವಾರದ ಸಿನಿಮಾ ಸ್ಟುಡಿಯೋಸ್ ಎನ್ನಲಾಗ್ತಿದೆ.. ಹೌಡು..! ಅಲ್ಲು ಕುಟುಂಬದವರು ಹೈದರಾಬಾದ್ ನಲ್ಲಿ ಸಿನಿಮಾ ಸ್ಟುಡಿಯೋ ನಿರ್ಮಾಣ ಮಾಡಿದ್ದು ಅಕ್ಟೋಬರ್ 1 ರಂದು ಪೂಜೆ ನೆರವೇರಿಸಿಲಿದ್ದು ಇದಕ್ಕೆ ಚಿರಂಜೀವಿ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗ್ತಿದೆ..
ಅಲ್ಲು ಅರ್ಜುನ್ ತಾತ ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯ ಹೆಸರಿನಲ್ಲಿ ಈ ಸ್ಟುಡಿಯೋ ನಿರ್ಮಾಣವಾಗಿದೆ. ಅಕ್ಟೋಬರ್ 1ರಂದು ರಾಮಲಿಂಗಯ್ಯ 100ನೇ ಜಯಂತೋತ್ಸವ ನಡೆಯಲಿದೆ. ಅದೇ ದಿನ ಸ್ಟುಡಿಯೋಗೆ ಚಾಲನೆ ಸಿಗಲಿದೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿ ಮದುವೆ ಆಗಿದ್ದಾರೆ. ಚಿರಂಜೀವಿ ಉಪಸ್ಥಿತಿಯಲ್ಲಿ ಅಲ್ಲು ಸ್ಟುಡಿಯೋಸ್ ಆರಂಭಿಸುವ ಬಗ್ಗೆ ಚರ್ಚೆ ನಡೀತಿದೆಯಂತೆ. ಇನ್ನು ಮೆಗಾ ಫ್ಯಾಮಿಲಿ ಸದಸ್ಯರೆಲ್ಲಾ ಕಾರ್ಯಕ್ರಮಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಈ ಬ್ಯುಸಿಯಲ್ಲಿ ಅಲ್ಲು ಅರ್ಜುನ್ ಇರುವ ಕಾರಣ ಪುಷ್ಪ 2 ಶೂಟಿಂಗ್ ತಡವಾಗ್ತಿದೆ ಎನ್ನಲಾಗ್ತಿದೆ..