BiggBoss Kannada 9 : ಮತ್ತೆ ಹಳೆ ಚಾಳಿ ಮುಂದುವರೆಸಿದ ಸಂಬರಗಿ – ಎಡಗಾಲಿನಲ್ಲಿ ಗುದ್ದಿ ಹೋಗ್ತೇನೆ ಎಂದ ಗುರೂಜಿ
ಬಿಗ್ ಬಾಸ್ ಸೆಪ್ಟೆಂಬರ್ 24 ರಿಂದ ಶುರುವಾಗಿದೆ,.. 18 ಮಂದಿ ಮನೆ ಸೇರಿದ್ದಾರೆ.. ಮಾಜಿ ಸ್ಪರ್ಧಿಗಳು ಒಟಿಟಿ ಕಂಟೆಸ್ಟೆಂಟ್ ಗಳು ಹೊಸಬರ ಸಮಾಗಮ ಬಹಳ ರೋಚಕವಾಗಿದ್ದು , ಜನರು ಎಕ್ಸೈಟ್ ಆಗಿದ್ದಾರೆ.. ಅಂದ್ಹಾಗೆ ಮೊದಲನೇ ದಿನವೇ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ..
ಕಿರಿಕ್ ಮೂಲಕವೇ ಸೀಸನ್ 8 ರಲ್ಲಿ ಹೈಲೇಟ್ ಆಗಿದ್ದ ಪ್ರಶಾಂತ್ ಸಂಬರ್ಗಿ ಈ ಬಾರಿಯೂ ಮನೆ ಪ್ರವೇಶ ಮಾಡಿದ್ದು , ಆರ್ಯವರ್ಧನ್ ಗುರೂಜಿ ಅವರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ..
ಸುಖಾ ಸುಮ್ಮನೆ ಆರ್ಯವರ್ಧನ್ ಗುರೂಜಿ ಜೊತೆಗೆ ಸಂಬರ್ಗಿ ಕಿರಿಕ್ ಮಾಡಿಕೊಂಡಿದ್ದಾರೆ.. ಇವರದ್ದು ಇದೇನೂ ಹೊಸ ಕಥೆಯಲ್ಲ.. ಸಂಬರ್ಗಿ ಹಳೇ ಸೀಸನ್ ನಲ್ಲೂ ಹೀಗೆಯೇ ಆಡ್ತಿದ್ದರು.. ಈಗಲೂ ಹಾಗೆಯೇ ತಮ್ಮ ಅದೇ ಹಳೇ ಚಾಳಿ ಮುಂದುವರೆಸಿದ್ದಾರೆಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡ್ತಿದ್ದಾರೆ,..
ಆರ್ಯವರ್ಧನ್ ಗುರೂಜಿ ತಮ್ಮ ಪಾಡಿಗೆ ತಾವೇ ಮಾತನಾಡಿಕೊಂಡು ಕುಳಿತಿರುತ್ತಾರೆ.. ಆಗ ಸಂಬರಗಿ ಸುಖಾಸುಮ್ಮನೆ ಮಾತನಾಡುತ್ತಾ ಇದು ಸಲ್ಪ ಅಲ್ಲ ಜಾಸ್ತಿಯೇ ಓವರ್ ಆಗಿದೆ ಎಂದು ಜಗಳಕ್ಕೆ ಬೀಳುತ್ತಾರೆ..
ಆಗ ಆರ್ಯವರ್ಧನ್ ಗುರೂಜಿಗಳು ನಾನು ಇಲ್ಲಿಯವರೆಗೂ 10 ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದು ಎಂದು ಹೇಳುತ್ತಾರೆ. ಅದಕ್ಕೆ ಉತ್ತರಿಸುವ ಪ್ರಶಾಂತ್ ಸಂಬರ್ಗಿ ಗುರುಗಳೇ ಏನೇನೋ ಮಾತನಾಡಬೇಡಿ 10 ಲಕ್ಷ ಜನ ಅಂತೆಲ್ಲಾ ಅನ್ನುತ್ತಾರೆ.
ಆಗ ಸಿಟ್ಟಾಗುವ ಗುರೂಜಿ ಎಡಗಾಲಲ್ಲಿ ಗುದ್ದು ಹೋಗ್ತೀನಿ.. ನನ್ನ ಬಗ್ಗೆಯೇ ಮಾತನಾಡುತ್ತೀಯಾ ಎನ್ನುತ್ತಾರೆ.. ಆಗಲೇ ಜಗಳ ಶುರುವಾಗುತ್ತೆ.. ಜಗಳ ಬಿಡಿಸೋದಕ್ಕೆ ಮನೆಯವರು ಮಧ್ಯಪ್ರವೇಶ ಮಾಡ್ತಾರೆ..
ಒಟ್ಟಾರೆ ಸುಖಾ ಸುಮ್ಮನೆ ಹಿಂದಿನ ಸಿಸನ್ ನಂತೆಯೇ ಈ ಸೀಸನ್ ನಲ್ಲೂ ಸಂಬರಗಿ ಕಿರಿಕ್ ತೆಗೆಯುವುದಕ್ಕೆ ಆರಂಭಿಸಿದ್ದು , ಸಂಬರಗಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ..