ಕೆಲ ವರ್ಷಗಳಿಂದ ರಾಜಕೀಯ ಹಾಗೂ ಸಿನಿಮಾರಂಗದಿಂದ ಮೋಹಕ ತಾರೆ ರಮ್ಯಾ ದೂರ ಉಳಿದಿದ್ದು , ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಆಪಲ್ ಬಾಕ್ಸ್ ಎಂಬ ಸಿನಿಮಾ ಹೌಸ್ ಬಗ್ಗೆ ಅಪ್ ಡೇಟ್ ನೀಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದ ರಮ್ಯಾ ಇದೀಗ ಅಕ್ಟೋಬರ್ 5 ವಿಜಯದಶಮಿ ಸಂದರ್ಭದಲ್ಲಿ ಮತ್ತೊಂದು ಸರ್ಪ್ರೈಸ್ ಕೊಡಲಿದ್ದಾರಂತೆ..
ಹೌದು..! ಇತ್ತೀಚೆಗೆ ಹೊಸ ಸಿನಿಮಾಗಳನ್ನ ಬೆಂಬಲಿಸುತ್ತಿರುವ ರಮ್ಯಾ ದಿಗಂತ್ ನಟನೆಯ ಹೊಂದಿಸಿ ಬರೆಯಿರಿಗೆ ಬೆಂಬಲಿಸಿದ್ದರು… ಅಲ್ಲದೇ ಕಾಂತಾರ ಸಿನಿಮಾ ವೀಕ್ಷಿಸಿ ಸಿನಿಮಾ ಅದ್ಭುತವಾಗಿದೆ ಎಂದೂ ಕೂಡ ರಿವ್ಯೂವ್ ಕೊಟ್ಟಿದ್ದಾರೆ..
ಇದೀಗ ಅಕ್ಟೋಬರ್ 5 ಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಡೋದಾಗಿ ಹೇಳಿದ್ದಾರೆ.. ಹೀಗಾಗಿ ಏನಿರಬಹುದು ಆ ಗುಡ್ ನ್ಯೂಸ್ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳನ್ನ ಆರಂಭಿಸಿದ್ದಾರೆ.. ಕೆಲವರು ರಾಜಕೀಯಕ್ಕೆ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರಾ..?? ಎಂದರೆ ಇನ್ನೂ ಕೆಲವರು ನಟನೆಗೆ ಕಮ್ ಬ್ಯಾಕ್ ಮಾಡಬಹುದಾ ಎನ್ನುತ್ತಿದ್ದಾರೆ..
ಮತ್ತೊಂದೆಡೆ ತಮ್ಮ ನಿರ್ನಮಾಣದ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರಾ ಎಂದೂ ಕೂಡ ಚರ್ಚೆ ಮಾಡ್ತಿದ್ದಾರೆ.. ಆದ್ರೆ ಎಲ್ಲಾ ಪ್ರಶ್ನೆ , ಕುತೂಹಲಗಳಿಗೆ ಅಕ್ಟೋಬರ್ 5 ರಂದೇ ಉತ್ತರ ಸಿಗಲಿದೆ..