Chiranjeevi : ರಾಜಮೌಳಿ ನಿರ್ದೇಶನದಲ್ಲಿ ನಾನು ನಟಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ – ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಅಕ್ಟೋಬರ್ 5 ರಂದು ಗಾಡ್ ಫಾದರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಈ ಸಿನಿಮಾದ ಪ್ರಮೋಷನ್ ಗಾಗಿ ಇತ್ತೀಚೆಗೆ ಚಿರಂಜೀವಿ ಅವರು ಹಿಂದಿ ಚಾನಲ್ ನಲ್ಲಿ ಸಂದರ್ಶನ ನೀಡಿದ್ದಾರೆ.
ಈ ವೇಳೆ ನಿರ್ದೇಶಕ ರಾಜಮೌಳಿ ಬಗ್ಗೆ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ನನಗೆ ರಾಜಮೌಳಿ ನಿರ್ದೇಶನದಲ್ಲಿ ನಟಿಸುವುದಿಲ್ಲ ಎಂದು ಚಿರಂಜೀವಿ ಹೇಳಿದ್ದಾರೆ.
ಇದಕ್ಕೆ ಆಂಕರ್ ಯಾಕೆ ಎಂದು ಪ್ರಶ್ನಿಸಿದರು. ಆಗ ಚಿರಂಜೀವಿ ರಾಜಮೌಳಿ ಉತ್ತಮ ನಿರ್ದೇಶಕರು.
ಭಾರತೀಯ ಸಿನಿಮಾ ಖ್ಯಾತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಪ್ರತಿ ವಿಷಯವನ್ನು ಅವರು ಗಾಢವಾಗಿ ನೋಡುತ್ತಾರೆ.
ಒಬ್ಬ ನಟನಾಗಿ ನಾನು ಅವರು ಕೋರಿಕೊಳ್ಳುವ ಔಟ್ ಪುಟ್ ಕೊಡ್ತೀನೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ರಾಜಮೌಳಿ ಒಂದು ಸಿನಿಮಾಗೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಒಂದು ಸಿನಿಮಾಗೆ ಅವರು ಮೂರರಿಂದ ನಾಲ್ಕು ವರ್ಷಗಳನ್ನ ತೆಗೆದುಕೊಳ್ಳುತ್ತಾರೆ.
ಆದ್ರೆ ನಾನು ಅದೇ ಸಮಯದಲ್ಲಿ ನಾಲ್ಕು ಸಿನಿಮಾಗಳನ್ನು ಮಾಡುತ್ತೇನೆ. ಅದಕ್ಕಾಗಿಯೇ ನಾನು ಅವರೊಂದಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲ.
ನನಗೆ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಇಲ್ಲ ಎಂದು ಹೇಳಿದ್ದಾರೆ.