Divorce ಹಿಂಪಡೆದು ಮತ್ತೆ ಒಂದಾಗಲಿದ್ದಾರಂತೆ ಐಶ್ವರ್ಯಾ – ಧನುಷ್
ಸೌತ್ ಇಂಡಸ್ಟ್ರಿಯ ಸ್ಟಾರ್ ಜೋಡಿಯಾಗಿದ್ದ ಧನುಷ್ ಹಾಗೂ ಐಶ್ವರ್ಯ ( ರಜನಿಕಾಂತ್ ಪುತ್ರಿ ) ದಂಪತಿ ತಿಂಗಳುಗಳ ಹಿಂದೆ ತಮ್ಮ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದರು.. ಮದುವೆಯಾದ 18 ವರ್ಷಗಳ ನಂತರ ಇಬ್ಬರೂ ಸಹ ವಿಚ್ಛೇದನ ಪಡೆದಿದ್ದರು..
ಈ ಸುದ್ದಿಯನ್ನ ಬ್ಬರೂ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದ ಹಾಗೆ ಅಭಿಮಾನಿಗಳಿಗೆ ಆಘಾತವಾಗಿತ್ತು.. ಆಗಿನಿಂದ ಆಗಿನವರೆಗೂ ಈಗಿನ ವರೆಗೂ ಇಬ್ಬರೂ ಒಂದಾಗಲಿ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದು , ಇದೀಗ ಅಭಿಮಾನಿಗಳ ಆಸೆ ಈಡೇರುವ ಲಕ್ಷಣಗಳು ದಟ್ಟವಾಗಿದೆ..
ಹೌದು..!
ಇದೀಗ ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ವಾಪಸ್ ಪಡೆದು ಮತ್ತೆ ಒಂದಾಗುವ ಯೋಚನೆಯಲ್ಲಿದ್ದಾರೆ ಎಂಬ ಸುದ್ದಿ ಸದ್ಯ ಸಿನಿಮಾರಂಗದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದ್ದು , ಅಭಿಮಾನಿಗಳಲ್ಲಿ ಒಂದು ಆಶಾ ಕಿರಣ ಮೂಡಿದೆ.. ಅಲ್ಲದೇ ಮಗಳು ಅಳಿಯ ಮತ್ತೆ ಒಂದಾಗಲು ರಜನಿಕಾಂತ್ ಅವರೇ ಕಾರಣವೆನ್ನಲಾಗ್ತಿದೆ..
ಆದ್ರೆ ಈ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ತಿದ್ದು , ಧನುಷ್ ಹಾಗೂ ಐಶ್ವರ್ಯ ಅಧಿಕೃತವಾಗಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ..