ನಿರ್ದೇಶಕಿ ಸುಧಾ ಕೊಂಗರ ಅವರು ತಮಿಳು ಸಿನಿಮಾರಂಗದಲ್ಲಿ ಕಂಟೆಂಟ್ ಬೇಸ್ಡ್ , ಹಾಗೂ ವಿಭಿನ್ನ ಸಿನಿಮಾಗಳನ್ನ ಮಾಡುವ ನಿರ್ದೇಶಕರ ಪೈಕಿ ಒಬ್ಬರು.. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯೂ ಇತ್ತು..
ಅಂದ್ಹಾಗೆ ಸುಧಾ ಕೊಂಗರ ಹಾಗೂ ಹೊಂಬಾಳೆ ಫಿಲಮ್ಸ್ ಕಾಂಬಿನೇಷನ್ ನಲ್ಲಿ ಈ ಹಿಂದೆಯೇ ಸಿನಿಮಾ ಅನೌನ್ಸ್ ಆಗಿದೆ.. ಆದ್ರೆ ಈ ಸಿನಿಮಾ ಯಾವುದು..?? ನಾಯಕ ಯಾರೆಂಬುದು ಇನ್ನೂವರೆಗೂ ಗೊತ್ತಾಗಿಲ್ಲವಾದ್ರೂ ಸೂರ್ಯ ನಾಯಕ ಎಂದೇ ಬಲವಾಗಿ ಚರ್ಚೆಯಾಗುತ್ತಿರುವ ಹೆಸರು..
ಆದ್ರೆ ಇತ್ತೀಚಿನ ಬೆಳವಣಿಗೆಗಳನ್ನ ನೋಡಿದ್ರೆ ಸೂರ್ಯ ಅಲ್ಲ ಅವರ ಬದಲಾಗಿ ಮತ್ತೊಬ್ಬ ಸ್ಟಾರ್ ತಮಿಳಿನ ನಟ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಚರ್ಚೆಯಾಗ್ತಿದೆ.. ಆ ನಟ ಮತ್ಯಾರೂ ಅಲ್ಲ ,,, ಸಿಂಬರಸನ್..
ಹೌದು..! ಇತ್ತೀಚೆಗೆ ಸಿಂಬಾ ಹೆಸರು ತುಸು ಹೆಚ್ಚಾಗಿಯೇ ಸೌಂಡ್ ಮಾಡ್ತಿದೆ.. ಅದ್ರಲ್ಲೂ ಕಾಂತಾರ ಸಿನಿಮಾಗೆ ಸಿಂಬ ವಿಷ್ ಮಾಡಿದ ಮೇಲಂತೂ ಈ ಅನುಮಾನ ತುಸು ಹೆಚ್ಚಾಗಿದೆ..
ಕಾಂತಾರ ಸಿನಿಮಾವನ್ನ ಸಿಂಬು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಸಿದ್ದರು.ಇದೇ ಕಾರಣಕ್ಕೆ ಇದೀಗ ಪಕ್ಕಾ ಹೊಂಬಾಳೆ ಫಿಲಮ್ಸ್ ಜೊತೆ ಸಿಂಬು ಸಿನಿಮಾ ಮಾಡ್ತಾರೆ ಅನ್ನೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಬಲವಾಗಿ ಕೇಳಿ ಬರ್ತಿದೆ..