ಬಿಗ್ ಬಾಸ್ ಕನ್ನಡ ಸೀಸನ್ 9 ಎರಡನೇ ವಾರ ಮುಕ್ತಾಯಗೊಂಡಿದೆ.. 2 ನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಸೈಕ್ ನವಾಜ್ ಹೋಗಿದ್ದಾರೆ.. ಉಳಿದ 16 ಕಂಟೆಸ್ಟೆಂಟ್ ಗಳ ನಡುವೆ ಇನ್ಮುಂದೆ ಆಟ ಹೇಗಿರಕಿದೆ ಅನ್ನೋ ಕುತೂಹಲ ಇದ್ದೇ ಇದೆ..
ಮೊದಲನೇ ವಾರ ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ ಔಟಾಗಿದ್ದರು.. 2 ನೇ ವಾರ ವೈರಲ್ ಹುಡುಗ ಸೈಕ್ ನವಾಜ್ ಮನೆಯಾಚೆ ಹೋಗಿದ್ದಾರೆ.. ಸೈಕ್ ನವಾಸ್ ಅವರ ಪಂಚಿಂಗ್ ಡೈಲಾಗ್ಸ್ ಬಿಗ್ ಬಾಸ್ ಮನೆಯಲ್ಲಿ ವರ್ಕೌಟ್ ಆಗಲಿಲ್ಲ…
9 ಮಂದಿ ನಾಮಿನೇಟ್ ಆಗಿದ್ದರು.. ಮೊದಲನೇ ದಿನವೇ ಮೂವರನ್ನ ಸೇಫ್ ಮಾಡಿದ್ದರು ಕಿಚ್ಚ ಸುದೀಪ್.. ಭಾನುವಾರ ನವಾಜ್ ಎಲಿಮಿನೇಟ್ ಎಂದು ಘೋಷಿಸಿದರು..
ಅಮೂಲ್ಯ ಗೌಡ, ಆರ್ಯವರ್ಧನ್, ದರ್ಶ್ ಚಂದ್ರಪ್ಪ, ನವಾಜ್, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ ಮತ್ತು ರೂಪೇಶ್ ರಾಜಣ್ಣ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು..
ಸೈಕ್ ನವಾಜ್ ಅರುಣ್ ಸಾಗರ್ ಹೊರತಾಗಿ ಮತ್ಯಾರ ಜೊತೆಗೂ ಅಷ್ಟಾಗಿ ಬೆರೆಯದೇ ಇದ್ದದ್ದೇ ಅವರ ಎಲಿಮಿನೇಷನ್ ಗೆ ಕಾರಣವಾಯ್ತಾ ಅನ್ನೋ ಚರ್ಚೆಗಳಾಗ್ತಿವೆ..
ನವಾಜ್ ಮನೆಯಲ್ಲಿ ಕಂಪ್ಲೀಟ್ ಸೈಲೆಂಟ್ ಆಗಿಬಿಟ್ಟಿದ್ದರು.. ಟಾಸ್ಕ್ ಗಳಲ್ಲೂ ಡಲ್ ಆಗಿದ್ದರು.. ಇನ್ನೂ ಎಲಿಮಿನೇಷನ್ ನಂತರ ಮನೆಯ ಕಿರಿಯ ಸದಸ್ಯನಾಗಿದ್ದ ಸೈಕ್ ನವಾಜ್ ಗೆ ಸ್ಟೇಜ್ ಮೇಲೆ ಕಿಚ್ಚ ಸುದೀಪ್ ಜೀವನದ ಪಾಠ ಮಾಡಿದ್ದಾರೆ..
Hamsalekha : ನಾದ ಬ್ರಹ್ಮ ಹಂಸಲೇಖ ಅವರಿಗೆ ಎದೆನೋವು , ಆಸ್ಪತ್ರೆಗೆ ದಾಖಲು