BiggBoss Kannada 9 -ಬಿಗ್ ಬಾಸ್ ಸೀಸನ್ 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. 2 ವಾರ ಮುಗಿದು ಮೂರನೇ ವಾರಕ್ಕೆ ಬಂದಿದೆ.. ಮನೆಯ ಮೂರನೇ ವಾರದ ಕ್ಯಾಪ್ಟನ್ ಆರ್ಯವರ್ಧನ್ ಗುರೂಜಿ.. ಮೊದಲನೇ ವಾರ ಶ್ವರ್ಯ ಪಿಸ್ಸೆ 2ನೇ ವಾರ ಸೈಕ್ ನವಾಜ್ ಎಲಿನಿಮೇಟ್ ಆಗಿದ್ದಾರೆ.. ಇನ್ನೂ 16 ಕಂಟೆಸ್ಟೆಂಟ್ ಗಳು ಬಾಕಿಯಿದ್ದು , ಒಬ್ಬೊಬ್ಬರೂ ಒಂದೊಮದು ರೀತಿಯ ವ್ಯಕ್ತಿತ್ವಗಳಿಂದ ಗುರುತಿಸಿಕೊಳ್ತಿದ್ದಾರೆ..
ಅದ್ರಲ್ಲೂ ಒಟಿಟಿಯಲ್ಲಿ ಸಖತ್ ಹೈಲೇಟ್ ಆಗಿದ್ದ ಆರ್ಯವರ್ಧನ್ ಗುರೂಜಿ ಅವರು ಟಿವಿ ಸೀಸನ್ ನಲ್ಲೂ ಮಿಂಚುತ್ತಿದ್ದಾರೆ… ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಗೆದ್ದು ಈ ವಾರ ಕ್ಯಾಪ್ಟನ್ ಆಗಿದ್ದು , ಕೊನೆಗೂ ಕ್ಯಾಪ್ಟನ್ ಆಗುವ ಕನಸು ನನಸಾಗಿಸಿಕೊಂಡಿದ್ದಾರೆ..
ಆದ್ರೆ ಅವರು ಕ್ಯಾಪ್ಟನ್ ಆಗಲಿಕ್ಕೆ ರಾಕೇಶ್ ಹಾಗೂ ರೂಪೇಶ್ ಇಬ್ಬರೂ ಸಹಾಯ ಮಾಡಿದ್ದರು.. ಹಾಗೆ ನೋಡಿದ್ರೆ ಈ ಮೂವರ ನಡುವೆ ಉತ್ತಮ ಆತ್ಮೀಯತೆ ಇದೆ..
ಟಾಸ್ಕ್ ನಲ್ಲಿ ಗುರೂಜಿಗೆ ಗೆಲ್ಲಲು ಸಹಾಯ ಮಾಡಿದಕ್ಕೆ ರಾಕೇಶ್ ಹಾಗೂ ರೂಪೇಶ್ ಗೆ ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ರು..
ಆದ್ರೆ ಗುರೂಜಿ ಈ ವಾರ ಕ್ಯಾಪ್ಟನ್ ಆಗಿರೋದು ಕೆಲವರಿಗೆ ಮನೆಯಲ್ಲಿ ಇಷ್ಟವಾಗ್ತಿರುವಂತೆ ಕಾಣಿಸುತ್ತಿಲ್ಲ.. ವಿಶೇಷವಾಗಿ ಅನುಪಮಾ ಹಾಗೂ ನೇಹಾರಿಗೆ..
ಹೌದು..!
ಕ್ಯಾಪ್ಟನ್ ಟಾಸ್ಕ್ ನಲ್ಲಿ ಭಾಗವಹಿಸಲು ನಾಲ್ಕು ಜನರನ್ನ ಯ್ಕೆ ಮಾಡಲಾಗಿತ್ತು.. ವಜ್ರಕಾಯ ತಂಡದ ನಾಯಕಿ ಅನುಪಮಗೆ ಬಿಗ್ ಬಾಸ್ ಆಯ್ಕೆ ಮಾಡಲು ಅವಕಾಶ ನೀಡಿದ್ದರು.
ಅದರಂತೆ ಅನುಪಮಾ ನಾಲ್ವರನ್ನ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಮಾಡಿದ್ದರು.. ಆರ್ಯವರ್ಧನ್ ಗುರೂಜಿ, ಎರಡನೇ ಹೆಸರು ಅಮೂಲ್ಯ , ಮೂರನೇ ಹೆಸರು ದಿವ್ಯಾ ಉರುಡುಗ ನಾಲ್ಕನೆ ಹೆಸರು ದರ್ಶ್ ಚಂದ್ರಪ್ಪರದ್ದು..
ಈ ಆಟದಲ್ಲಿ ನಂಬರ್ ಜೋಡಿಸಬೇಕಿತ್ತು. ಕಪ್ಪು ಬಣ್ಣದ ತೆಂಗಿನ ಕಾಯಿ, ಬಿಳಿ ಬಣ್ಣದ ತೆಂಗಿನ ಕಾಯಿಗಳು ಇಲ್ಲಿದ್ದವು. ಎಲ್ಲರೂ ಇವುಗಳನ್ನ ನಂಬರ್ ರೂಪದಲ್ಲಿ ಕೂಡಿಸಬೇಕಿತ್ತು. ಇದೇ ಟಾಸ್ಕ್ ನಲ್ಲಿ ಗುರೂಜಿ ಗೆದ್ದರು..
ಆದ್ರೆ ಗುರೂಜಿ ಅವರು ರಾಕೇಶ್ , ರೂಪೇಶ್ ರ ಸಹಾಯ ಪಡೆದು ಗೆದ್ದಿದ್ದಾರೆಂಬುದು ಕೆಲ ಸ್ಪರ್ಧಿಗಳ ವಾದ..
ಗುರೂಜಿಗೆ ನಂಬರ್ ಜೋಡಿಸೋಕೆ ಸಾಧ್ಯವಾಗುತ್ತಿರಲಿಲ್ಲ.. ಡೌಟ್ ಅಲ್ಲಿಯೇ ಆಡ್ತಾ ಇದ್ದರು. ಈ ಸಮಯದಲ್ಲಿ ರೂಪೇಶ್ ಶೆಟ್ಟಿ ರಾಕೇಶ್ ಅಡಿಗ ಸಹಾಯ ಮಾಡಿದ್ದರು.. ಹೀಗಾಗಿ ಗುರೂಜಿ ಗೆದ್ದರು. ಆ ವಿಷಯವನ್ನ ಸ್ವತಃ ಬಿಗ್ ಬಾಸ್ ಅನೌನ್ಸ್ ಮಾಡಿದರು. ಇದರಿಂದ ಅನೇಕರಿಗೆ ಖುಷಿಯಾದ್ರೂ ಕೆಲವರಿಗೆ ಬೇಸರವಾಗಿದೆ.
ಗುರೂಜಿ ಗೆಲವು ಗೆಲುವಲ್ಲ. ರೂಪೇಶ್ , ರಾಕೇಶ್ ಅವರಿಗೆ ಹೆಲ್ಪ್ ಮಾಡಿದ್ದಾರೆ. ಸಪೋರ್ಟ್ ಮಾಡೋದು ಬೇರೆ. ಹೀಗೇ ಮಾಡು ಹಾಗೆ ಮಾಡು ಅಂತ ಹೇಳಿ ಗುರೂಜಿಯನ್ನ ಗೆಲ್ಲಿಸಿದರು ಅಂತ ನೇಹಾ ಗೌಡ, ಪ್ರಶಾಂತ್ ಸಂಬರ್ಗಿ ಮುಂದೆ ಹೇಳಿಕೊಂಡಿದ್ದರು. ಇತ್ತ ಅನುಪಮ ಅವರಿಗೂ ಗುರೂಜಿ ಗೆಲುವಿನ ಮೇಲೆ ಅನುಮಾನವಿರುವಂತೆ ಕಾಣುತ್ತಿದೆ..