ಯಾವುದೇ ಒಂದು ಸಿನಿಮಾ ಎಷ್ಟೇ ಉತ್ತಮವಾಗಿರಲಿ, ಸೂಪರ್ ಹಿಟ್ ಆಗಲಿ, ಜನರಿಂದ ಅದೆಷ್ಟೇ ಒಳ್ಲೆ ಪ್ರತಿಕ್ರಿಯೆ ಗಳಿಸಲಿ.. ಪಾಸಿಟಿವ್ ರಿವ್ಯೂವ್ ಗಳನ್ನ ಪಡೆಯಲಿ.. ಪಾಸಿಟಿವಿಟಿ ಜೊತೆಗೆ ಒಂದಲ್ಲ ಒಂದು ನೆಗೆಟಿವ್ ವಿಚಾರಗಳನ್ನ ತ್ತಿ ತೋರಿಸೋದು ಸರ್ವೇ ಸಾಮಾನ್ಯ..
ಅದ್ರಲ್ಲೂ ಹಿಟ್ ಸಿನಿಮಾಗಳಿಗೆ ಕಾಂಟ್ರವರ್ಸಿ , ಆರೋಪಗಳು , ತಪ್ಪು ಹುಡುಕೋದು ಹೊಸತೇನಲ್ಲ.. ಅಂದ್ಹಾಗೆ ಇದೀಗ ಬಾಕ್ಸ್ ಆಫೀಸ್ ನಡುಗಿಸುತ್ತಿರುವ ಕನ್ನಡದ ಸೂಪರ್ ಹಿಟ್ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾವೂ ಇಂತಹದ್ದೇ ಸ್ಥಿತಿಯನ್ನ ಎದುರಿಸುತ್ತಿದೆ..
ಹೊಸ ಸಂಚಲನವನ್ನೇ ಸೃಷ್ಟಿ ಮಾಡಿರುವ ಕಾಂತಾರ ಸಿನಿಮಾದಲ್ಲಿ ಬಿಜಿಎಮ್ ಹಾಡುಗಳು ಸಖತ್ ಹಿಟ್ ಆಗೆದೆ.. ಅದ್ರಲ್ಲೂ ವರಾಹ ರೂಪಂ ಹಾಡನ್ನ ಜನರು ಗುಣುಗುಡುವಷ್ಟರ ಮಟ್ಟಿಗೆ ಹಾ ಲಿರಿಕ್ಸ್ ಆ ಟ್ಯೂನ್ ಜನರ ಮನಸ್ಸಿಗೆ ಹಿಡಿಸಿದೆ..
ಆದ್ರೆ ಇದೇ ‘ವರಾಹ ರೂಪಂ’ ಹಾಡಿನ ಟ್ಯೂನ್ ಅನ್ನ ಮಲಯಾಳಂನ ಹಾಡಿನಿಂದ ಕದಿಯಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ರೋಪಿಸುತ್ತಿದ್ದಾರೆ.. ಸಾಕ್ಷಿಗಳನ್ನೂ ನೀಡುತ್ತಿದ್ದಾರೆ..
ಅಜನೀಶ್ ಬಿ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿರುವ ಈ ಹಾಡಿನ ಟ್ಯೂನ್ ಕದ್ದಿರುವ ಆರೋಪ ಕೇಳಿಬರುತ್ತಿದೆ..
5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಅಲ್ಬಮ್ ಹಾಡು ರಿಲೀಸ್ ಗಿತ್ತು. ಥೈಕ್ಕುಡಂ ಬ್ರಿಡ್ಜ್ ಅನ್ನೋ ಹೆಸರಿನಲ್ಲಿ ಈ ಹಾಡಿನ ಟ್ಯೂನ್ ಹಾಕಿ ಕಂಪೋಸ್ ಮಾಡಲಾಗಿತ್ತು. ಮಾತೃಭೂಮಿ ಕಪ್ಪಾ ಟಿವಿಯಲ್ಲಿ ಈ ನವರಸಂ ಹಾಡು ವೀಕ್ಷಣೆಗೆ ಲಭ್ಯವಿದೆ.
ಅಂದ್ಹಾಗೆ ಈ ಹಾಡಿಗೂ ಹಾಗೂ ಕಾಂತಾರದ ವರಾಹ ರೂಪಂ ಹಾಡಿನ ಟ್ಯೂನ್ ಗೂ ಸಾಕಷ್ಟು ಸ್ವಾಮ್ಯತೆ ಇದೆ..
ಹೀಗಾಗಿಯೇ ವರಾಹ ರೂಪಂ ಹಾಡಿನ ಟ್ಯೂನ್ ಕದ್ದಿರೋದಾಗಿ ಮ್ಯೂಸಿಕ್ ಕಂಪೋಸರ್ ಅಜನೀಶ್ ಲೋಕನಾಥ್ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರುತ್ತಿದ್ದಾರೆ..
ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದ ಹಾಗೆಯೇ ಈ ಬಗ್ಗೆ ಖಾಸಗಿ ವಾಹಿನಿಗೆ ಸ್ಪಷ್ಟನೆ ನೀಡಿರುವ ಅಜನೀಶ್ ಅವರು , ನವರಸಂ ಹಾಗೂ ಕಾಂತಾರದ ವರಹ ರೂಪಂ ಹಾಡಿಗೂ ಸಾಕಷ್ಟು ಸ್ವಾಮ್ಯತೆ ಇದೆ.. ಹೀಗಾಗಿ ಇಂತಹ ಅನುಮಾನ ಮೂಡುವುದು ಸಹಜವೇ…
ಆದ್ರೆ ಆಲ್ಬಮ್ ಹಾಡು ಮಾಡಿದವರು ಈ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ ಯಾಕೆ..?? ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ, ಯಾವುದು ಕಾಪಿ ಅಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅಜನೀಶ್ ಅವರು ಹೇಳಿದ್ದಾರೆ.
ಆದ್ರೆ ನಾನು ಸ್ಟೈಲ್ ವಿಚಾರದಲ್ಲಿ ಇನ್ ಸ್ಪೈರ್ ಆಗಿದ್ದೀನಿ ಅಷ್ಟೇ… ನವರಸಂ ಹಾಡು ಮಾಡಿದ್ದ ರಾಕ್ ಬ್ಯಾಂಡ್ ಸ್ಟೈಲ್ ನಿಂದ ಇನ್ ಸ್ಪೈರ್ ಆಗಿದ್ದೀವಿ ಅಷ್ಟೇ.. ಬಿಟ್ಟರೇ ಆ ಹಾಡಿಗೂ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ ದು ಸ್ಪಷ್ಟನೆ ನೀಡಿದ್ದಾರೆ..
ಇನ್ನೂ ಮಲಯಾಳಂ ಹಾಡನ್ನ ತಲೆಯಲ್ಲಿ ಇಟ್ಟುಕೊಂಡು ಈ ಹಾಡನ್ನ ಖಂಡಿತ ಮಾಡಿಲ್ಲ. ಇಂಗ್ಲೀಷ್ ಸಾಂಗ್ಸ್ ಕೇಳಿ ಕೆಲವೊಮ್ಮೆ ಇದೇ ಸ್ಟೈಲ್ ನಲ್ಲಿ ಸಾಂಗ್ ಮಾಡೋಣ ಎಂದುಕೊಳ್ಳುತ್ತೀವಿ ಅಲ್ವಾ ಅದೇ ರೀತಿ ಇದು. ಯಾಕೆ ಸಾಮ್ಯತೆ ಅನ್ನಿಸ್ತಿದೆ ಅಂದ ಒಂದು ರಾಗ ಅಂದಾಕ್ಷಣ, ಅದರ ಸಂಚಾರ, ಛಾಯೆ ಒಂದೇ ರೀತಿ ಇರುತ್ತದೆ. ನವರಸಂ ಹಾಡು ನನಗೆ ಗೊತ್ತೇಯಿಲ್ಲ ಎಂದು ಹೇಳುತ್ತಿಲ್ಲ. ಅದನ್ನು ಕೇಳಿದಾಗ ನಿಜಕ್ಕೂ ಅದ್ಭುತವಾಗಿದೆ ಎನ್ನಿಸಿತ್ತು. ಈ ಸ್ಟೈಲ್ ನಲ್ಲೇ ನಾವು ಒಂದು ಹೊಸ ಹಾಡು ಮಾಡೋಣ ಎಂದು ಮಾಡಿದ್ದು. ಎಲ್ಲಿ ನಮಗೆ ಸಾಮ್ಯತೆ ಅನ್ನಿಸುತ್ತಿದ ಅಂದರೆ, ಆ ರಾಗದ ಛಾಯೆ. ಜೊತೆಗೆ ಅದರ ಟೆಂಪೋ ಒಂದೇ ತರ ಇರುವುದರಿಂದ ಎರಡೂ ಒಂದೇ ಎನ್ನಿಸುತ್ತೆ. ಅದು ಬಿಟ್ಟರೆ ಎರಡೂ ಕೂಡ ಬೇರೆ ಬೇರೆ ಕಂಪೋಸಿಷನ್ ಎಂದಿದ್ದಾರೆ ಅಜನೀಶ್ ಲೋಕನಾಥ್…