Surya : ರೋಲೆಕ್ಸ್ ಪಾತ್ರ ಮಾಡಲು ಇಷ್ಟವಿಲ್ಲದೇ ಇದ್ರು ಅವರಬ್ಬೊರ ಒತ್ತಾಯದಿಂದ ನಟಿಸಿದ ಸೂರ್ಯ..!!
ಕಾಲಿವುಡ್ ಅತ್ಯಂತ ಜನಪ್ರಿಯ ನಟ ಸೂರ್ಯ ವಿಭಿನ್ನ ಪಾತ್ರಗಳ ಮೂಲಕ ಜನರನ್ನ ರಂಜಿಸುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ನಡೆದಿದ್ದ ಫಿಲ್ಮ ಫೇರ್ ಅವಾರ್ಡ ನಲ್ಲಿ ಸೂರೂರೈ ಪೋಟ್ರೂ ಚಿತ್ರಕ್ಕೆ ಉತ್ತಮ ನಾಯಕ ನಟ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಸೂರ್ಯ ರೋಲೆಕ್ಸ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಕಮಲ್ ಹಾಸನ ನಟನೆಯ ವಿಕ್ರಮ್ ಚಿತ್ರದ ಕೊನೆಯಲ್ಲಿ ಬರುವ ರೋಲೆಕ್ಸ್ ಪಾತ್ರ ತುಂಬಾ ಜನಪ್ರಿಯವಾಗಿತ್ತು. ಈ ಕುರಿತು ಫಿಲ್ಮ ಫೇರ್ ವೇದಿಕೆಯಲ್ಲಿ ಮಾತನಾಡಿದ ಸೂರ್ಯ ”ನನ್ನ ಜೀವನ ಈ ಮಟ್ಟದಲ್ಲಿರಲು ಕಮಲ್ ಹಾಸನ್ ಸರ್ ತುಂಬಾ ಪ್ರೇರೇಪಿಸಿದ್ದಾರೆ. ಫೋನ್ ಮಾಡಿ ಅವಕಾಶವಿದೆ ಎಂದು ಹೇಳಿದಾಗ ಬಿಡಲು ಮನಸ್ಸಾಗಲಿಲ್ಲ. ನಾನು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕೊನೆಯ ಗಳಿಗೆಯಲ್ಲಿ ರೋಲೆಕ್ಸ್ ಪಾತ್ರ ಮಾಡಲು ನಿರ್ಧರಿಸಿದೆ. ನಾನು ಈ ಪಾತ್ರ ಮಾಡುವುದಿಲ್ಲ ಎಂದು ಲೋಕೇಶ್ಗೆ ಹೇಳಬೇಕೆಂದಿದ್ದೆ. ಆದರೆ ಒಬ್ಬರಿಗಾಗಿ ನಾನು ಆ ಪಾತ್ರ ಮಾಡಿದೆ. ಅವರೇ ವಿಶ್ವನಾಯಕ ಕಮಲಹಾಸನ್” ಎಂದು ಸೂರ್ಯ ಹೇಳಿದ್ದಾರೆ.
ಕಮಲ್ ಹಾಸನ್, ಫಹದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ‘ವಿಕ್ರಮ್’ ರೂ.400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದು ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ಕ್ಲೈಮ್ಯಾಕ್ಸ್ನಲ್ಲಿ, ಸೂರ್ಯ ಡ್ರಗ್ ಕಿಂಗ್ಪಿನ್ ರೋಲೆಕ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇವಲ ಐದು ನಿಮಿಷ ಕಾಣಿಸಿಕೊಂಡರೂ ವಿಲನ್ ಆಗಿ ಪ್ರೇಕ್ಷಕರನ್ನು ಹೆದರಿಸಿದರು.