BBK9 : ಲಿಮಿಟ್ ಕ್ರಾಸ್ ಮಾಡಬೇಡಿ , ಇದು ಪಿಕ್ ನಿಕ್ ಸ್ಪಾಟ್ ಅಲ್ಲ – ರೂಪೇಶ್ ಸಾನ್ಯಾಗೆ ಸುದೀಪ್ ವಾರ್ನಿಂಗ್..!!
ಬಿಗ್ ಬಾಸ್ ಎಲ್ಲಾ ಸೀಸನ್ ನಲ್ಲೂ ಲವ್ ಸ್ಟೋರಿಗಳು , ಗಾಸಿಪ್ ಗಳು ಹುಟ್ಟಿಕೊಳ್ಳುವುದು ಕಾಮನ್..
ತೀರಾ ಆಪ್ತೆತಯೂ ಬೆಳೆದುಬಿಡುತ್ತೆ ಎನಿಸಿರುವ ಹಲವು ಸಾಕ್ಷಿಗಳಿವೆ.. ಆದ್ರೆ ಒಟಿಟಿ ಮೂಲಕ ಗಮನ ಸೆಳೆದು ಕ್ಯೂಟ್ ಜೋಡಿ ಎನಿಸಿಕೊಳ್ತಿರುವ ಸಾನ್ಯಾ ರೂಪೇಶ್ ನಡುವಿನ ಆಪ್ತತೆ ಟಿವಿ ಬಿಗ್ ಬಾಸ್ ನಲ್ಲಿ ಮತ್ತೊಂದು ಹಂತಕ್ಕೆ ತಲುಪಿದೆ.. ಅಂದ್ರೆ ಮಿತಿ ಮೀರಿದೆ ಅಂದ್ರು ತಪ್ಪಾಗಲಾರದು..
ಆದ್ರೆ ಈ ಇಬ್ಬರ ಆಪ್ತತೆ ವಿರುದ್ಧ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್ ಮಾತನಾಡುತ್ತಾ ,,, ಇದು ಪಿಕ್ ನಿಕ್ ಸ್ಪಾಟ್ ಅಲ್ಲ , ಅದಕ್ಕೆಲ್ಲ ಇದು ಜಾಗವಲ್ಲ , ಲಿಮಿಟ್ ಕ್ರಾಸ್ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ..
ನಿನ್ನೆ ರಾತ್ರಿ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸನ್ಯಾ ಮತ್ತು ರೂಪೇಶ್ ಇಬ್ಬರಿಗೂ ಗೆರೆ ದಾಟಿದ್ದಕ್ಕೆ ಕಿವಿಮಾತು ಹೇಳಿದರು. ಸಾರ್ವಜನಿಕವಾಗಿ ನಡೆದುಕೊಳ್ಳಬೇಕು ಎಂದರು.
ಅಲ್ಲದೆ, ಹೊರಗಡೆ ಒಂದಷ್ಟು ಖ್ಯಾತಿ ಗಳಿಸಿ ಮನೆ ಪ್ರವೇಶಿಸಿದ್ದು, ಮನೆಯಿಂದ ಹೊರಬರುವವರೆಗೂ ಅದನ್ನು ಕಾಯ್ದುಕೊಳ್ಳಬೇಕು ಎಂದು ರೂಪೇಶ್ ಗೆ ತಿಳಿಸಿದರು. ರೂಪೇಶ್ ಕ್ಷಮೆಯಾಚಿಸುತ್ತಾ ಇನ್ಮುಂದೆ ಹೆಚ್ಚು ಜಾಗರೂಕರಾಗಿರುತ್ತೇನೆ ಎಂದು ಹೇಳಿದರು.
ನಂತರ ಸುದೀಪ್ ಅವರು ಸನ್ಯಾ ಅಯ್ಯರ್ ಅವರ ನಡವಳಿಕೆಯ ಬಗ್ಗೆ ಮಾತನಾಡ್ತಾ ಎಚ್ಚರವಾಗಿರಿ ಮತ್ತು ಜಾಗೃತರಾಗಿರಿ ಎಂದು ಸಲಹೆ ನೀಡಿದ್ದಾರೆ..
ಅಷ್ಟೇ ಅಲ್ಲದೇ ಒಂದು ವಿಡಿಯೋ ತುಣುಕಿನ ಬಗ್ಗೆಯೂ ಮಾತನಾಡಿದ್ದಾರೆ.. ಬಿಬಿಕೆ 9 ಅಭಿಮಾನಿಗಳು ಸೋರಿಕೆಯಾದ ಕ್ಲಿಪ್ ಕುರಿತು ವಾಹಿನಿಯನ್ನ ಪ್ರಶ್ನಿಸಿದ ನಂತರ ಇದು ಕುಟುಂಬ ಸಮೇತ ಶೋ ವೀಕ್ಷಣೆಗೆ ಆಕ್ಷೇಪಾರ್ಹವೆಂದು ಹೇಳಿದ್ದಾರೆ.