ದೇಶಾದ್ಯಂತ ಕಾಂತಾರ ಕ್ರೇಜ್ … ಯಾವ ಭಾಷೆಯ ಸಿನಿಮಾರಂಗದಲ್ಲೂ ಕಾಂತಾರ ಬಗ್ಗೆ ಜನ ಕೊಂಡಾಡುತ್ತಿದ್ದಾರೆ.. ಈಗಾಗಲೇ ಕನ್ನಡ , ತೆಲುಗು , ಹಿಂದಿ , ತಮಿಳು ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ ಕಾಂತಾರ ಇದೀಗ ಮಲಯಾಳಂನಲ್ಲೂ ರಿಲೀಸ್ ಆಗಿದ್ದು ಫಸ್ಟ್ ಡೇ ಕಲೆಕ್ಷನ್ ಬಗ್ಗೆ ನಾಳೆ ಗೊತ್ತಾಗಲಿದೆ..
ಆದ್ರೆ ಒಳ್ಳೆಯ ಓಪನಿಂಗ್ ಅಂತೂ ಸಿನಿಮಾ ಪಡೆದುಕೊಂಡಿದೆ.. ಸಿನಿಮಾ ಈಗಾಗಲೇ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ..
ಅಂದ್ಹಾಗೆ ಸಿನಿಮಾವನ್ನ ಸ್ಟಾರ್ ನಟರು ಕೊಂಡಾಡುತ್ತಿದ್ದಾರೆ.. ಇದೀಗ ಈ ಲಿಸ್ಟ್ ಗೆ ಖ್ಯಾತ ನಟ , ನಿರ್ದೇಶಕ ದೇವದಾಸ್ ಕಾಪಿಕಾಡ್ ಸೇರಿಕೊಂಡಿದ್ದಾರೆ..
ಹೌದು..!
ದೇವದಾಸ್ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು , ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದ್ರೂ ಗೆಲ್ಲುತ್ತೆ.. ಜಪಾನೀಸ್ ಇರಲಿ , ಚೈನೀಸ್ ಇರಲಿ ಎಲ್ಲಾ ಬಾಷೆಯಲ್ಲೂ ಸಿನಿಮಾ ಓಡುತ್ತೆ.. ಅಷ್ಟೇ ಯಾಕೆ.. ಈ ಸಿನಿಮಾವನ್ನ ಮತ್ತೆ ರಿಷಬ್ ಅವರಿಂದಲೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ..
ಚಿತ್ರ ಬಹಳಷ್ಟು ನೈಜವಾಗಿ ಮೂಡಿಬಂದಿದೆ.. ಚಿತ್ರದ ಬಗ್ಗೆ ವಿರೋಧ ಮಾಡುವವರು ತಮ್ಮ ಬಗ್ಗೆ ತಾವು ವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ..
ದೈವಾರಾಧನೆಗೆ ಯಾವ ಚ್ಯುತಿಯೂ ಬಾರದಂತೆ ಸಿನಿಮಾ ನಿರ್ಮಿಸಲಾಗಿದೆ..
ದೈವಾರಾಧಾನೆ ತುಳುನಾಡಿನ ಪ್ರಮುಖ ಅಂಗ.. ಅದು ಹಿಂದೂ ಧರ್ಮದ ಭಾಗ ಅಲ್ಲ ಅನ್ನೋರನ್ನ ಏನೂ ಮಾಡಲೂ ಸಾಧ್ಯವಿಲ್ಲ, ಅಂಥವರಿಗೆ ಉತ್ತರ ಕೊಡದೇ ಇರುವುದೇ ಉತ್ತಮ, ಸತ್ಯ ಏನೆಂದು ಅವರಿಗೆ ಗೊತ್ತಾದಾಗ ಅವರೇ ಸರಿಹೋಗ್ತಾರೆ ಎನ್ನುತ್ತ ಹೆಸರು ಹೇಳದೇ ಪರೋಕ್ಷವಾಗಿ ಚೇತನ್ ಗೆ ಟಾಂಟ್ ಕೊಟ್ಟಿದ್ದಾರೆ..