Kantara : ಕಾಂತಾರ ದೇಶಾದ್ಯಂತ ಭಾರೀ ಸೌಂಡ್ ಮಾಡ್ತಿದೆ.. ಸಿನಿಮಾಗೆ ಅದ್ರಲ್ಲೂ ಕ್ಲೈಮ್ಯಾಕ್ಸ್ ಗೆ ಜನರು ಫಿದಾ ಆಗಿದ್ದಾರೆ.. ರಿಷನ್ ನಟನೆಗೆ ರೋಮಾಂಚನಗೊಂಡಿದ್ದಾರೆ.. ಸಿನಿಮಾಗೆ , ರಿಷಬ್ ನಟನೆಗೆ , ಅವರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂದು ಚರ್ಚೆಗಳ ನಡುವೆ ಇದೀಗ ಸಿನಿಮಾವನ್ನ ಆಸ್ಕರ್ ರೇಸ್ ಗೆ ಕಳುಹಿಸಲು ಸೋಷಿಯಲ್ ಮೀಡಿಯಾದಲ್ಲಿ ಈಗಿನಿಂದಲೇ ಅಭಿಯಾನ ಶುರುವಾಗಿದೆ..
ಅಲ್ಲದೇ ಇದು ಆಸ್ಕರ್ ಗೆ ಅರ್ಹ ಪ್ರವೇಶವಾಗಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅಭಿಪ್ರಾಯಪಟ್ಟಿದ್ದಾರೆ.. ಟ್ವಿಟ್ಟರ್ ಬಳಕೆದಾರರು ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ ಚಿತ್ರವನ್ನು ಮುಂದಿನ ವರ್ಷ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ..
ಏಕೆಂದರೆ ಚಲನಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಕಾಂತಾರವು ಸಾಕಷ್ಟು ನೈಜತೆ ಹಾಗೂ ನಮ್ಮ ನೆಲದ ಸೊಗಡಿನ ಸಿನಿಮಾವಾಗಿದ್ದು , ನಮ್ಮ ಸಂಸ್ಕೃತಿಯನ್ನ ಎತಿ ಹಿಡಿದಿರುವ ಸಿನಿಮಾವಾಗಿದೆ..
ನೆಟ್ಟಿಗರು ಸಹ ಿದೇ ಅಭಿಪ್ರಾಯಗಳನ್ನ ಹೊರಹಾಕುತ್ತಿದ್ದಾರೆ..
ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ವಿಶ್ವ ಚಿತ್ರರಂಗಕ್ಕೆ ಪ್ರದರ್ಶಿಸಲು ಕಾಂತಾರ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಬಳಕೆದಾರರು ಬರೆದುಕೊಂಡು ಈಗಿನಿಂದಲೇ ಕಾಂತಾರವನ್ನ ಆಸ್ಕರ್ ಗೆ ಕಳುಹಿಸಲು ಅಭಿಯಾನ ಶುರು ಮಾಡಿದ್ದಾರೆ..
ಇದನ್ನೂ ಓದಿ : https://cinibazaar.com/2022/10/21/brahmastra-ott-cinibazaar