Nartan – Ramcharan : ಮಫ್ತಿ ನಿರ್ದೇಶಕನ ಮುಂದಿನ ಸಿನಿಮಾಗೆ ಯಶ್ ಅಲ್ಲ ರಾಮ್ ಚರಣ್ ಹೀರೋ..!!??
ನರ್ತನ್… ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ ನಿರ್ದೇಶಕರು… ಇವರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಅನ್ನೋ ಸುದ್ದಿ ಬಹಳ ತಿಂಗಳುಗಳಿಂದಲೂ ಸೌಂಡ್ ಮಾಡ್ತಿದೆ..
ಇತ್ತೀಚೆಗೆ ನರ್ತನ್ ಅವರ ಸಿನಿಮಾದಲ್ಲಿ ಯಶ್ ಗೆ ಪೂಜಾ ಹೆಗ್ಡೆ ನಾಯಕಿ ಅಂತ ಸುದ್ದಿಯಾಯ್ತು.. ನಂತರ ರಾಮ್ ಚರಣ್ ಹಾಗೂ ಯಶ್ ಇಬ್ಬರೂ ನರ್ತನ್ ನಿರ್ದೇಶದಲ್ಲಿ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ತಾರೆ ಎನ್ನಲಾಗ್ತಿತ್ತು..
ಹೀಗೆ ಬರೀ ಗಾಸಿಪ್ ನಿಂದಲೇ ನರ್ತನ್ ಸುದ್ದಿಯಲ್ಲಿದ್ದಾರೆ.. ಇದೀಗ ನರ್ತನ್ ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಗೆ ಆಕ್ಷನ್ ಕಟ್ ಹೇಳ್ತಾರೆ..ನರ್ತನ್ ಮುಂದಿನ ಸಿನಿಮಾದ ನಾಯಕ ರಾಮ್ ಚರಣ್ ಅಂತ ಹೇಳಲಾಗ್ತಿದೆ..
ಆದ್ರೆ ಇದು ಕೂಡ ಗಾಸಿಪ್ ಆಗಿದ್ದು ಅಧಿಕೃತವಾಗಿ ಯಾವುದೇ ವಿಚಾರ ತಿಳಿದುಬಂದಿಲ್ಲ…